ಶನಿವಾರ, ಜನವರಿ 18, 2020
21 °C

ಟೆನಿಸ್: ಸೆಮಿಗೆ ರಿಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಷಿ ರೆಡ್ಡಿ ಹಾಗೂ ಎಸ್‌.ಸೋಹಾ ಇಲ್ಲಿನ ಟಾಪ್ ಸ್ಪಿನ್‌ ಅಕಾಡೆಮಿಯಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಎಐಟಿಎ ಚಾಂಪಿಯನ್‌ಷಿಪ್‌ ಸರಣಿ  ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ  ರಿಷಿ 3–5, 4–1, 7–3ರಲ್ಲಿ ಆದಿಲ್‌ ಕಲ್ಯಾಣಪುರ್‌ ಅವರನ್ನು ಸೋಲಿಸಿದರು.  ಸೋಹಾ 4–0, 4–1ರಲ್ಲಿ ತ್ರಿಷಾ ವಿನೋದ್‌ ಎದುರು ಗೆದ್ದರು.   ಬಾಲಕರ ವಿಭಾಗದ ಇನ್ನುಳಿದ ಎಂಟರ ಘಟ್ಟದ ಪಂದ್ಯಗಳಲ್ಲಿ ರಾಹುಲ್‌ ಶಂಕರ್‌ 3–5, 4–0, 7–1ರಲ್ಲಿ ಪ್ರಣವ್‌್ ಪೊನಾಕ ಎದುರೂ ಮೇಲೂ ಗೆಲುವು ಸಾಧಿಸಿದರು.

ಪ್ರತಿಕ್ರಿಯಿಸಿ (+)