ಶುಕ್ರವಾರ, ಮೇ 14, 2021
35 °C

ಟೆನ್‌ಪಿನ್ ಬೌಲಿಂಗ್, ಮಿಂಚಿದ ವರುಣ್, ಐಶ್ವರ್ಯಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ವರುಣ್ ಗಣಪತಿ ಮತ್ತು ಐಶ್ವರ್ಯ ರಾವ್ ಇಲ್ಲಿ ನಡೆದ 21 ವರ್ಷ ವಯಸ್ಸಿನೊಳಗಿನವರ ರಾಷ್ಟ್ರೀಯ ಜೂನಿಯರ್ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಸ್ಟ್ರಾರ್ ಸಿಟಿ ಬೌಲಿಂಗ್ ಕೇಂದ್ರದಲ್ಲಿ ಶನಿವಾರ ನಡೆದ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ವರುಣ್ 323-313 ರಲ್ಲಿ ತಮಿಳುನಾಡಿನ ರಿಷಬ್ ಕಾಂತಿಲಾಲ್ ವಿರುದ್ಧ ಜಯ ಪಡೆದರು. ಮೊದಲ ಹಂತದ ಕೊನೆಯಲ್ಲಿ 157-158 ರಲ್ಲಿ ಹಿನ್ನಡೆ ಅನುಭವಿಸಿದ್ದ ವರುಣ್ ಎರಡನೇ ಹಂತದಲ್ಲಿ 166-155 ರಲ್ಲಿ ಮುನ್ನಡೆ ಪಡೆದು ಚಾಂಪಿಯನ್ ಆದರು.ಸೆಮಿಫೈನಲ್ ಪಂದ್ಯಗಳಲ್ಲಿ ವರುಣ್ 301-272 ರಲ್ಲಿ ಪಿ. ವಿವೇಕ್ ಅವರನ್ನು ಮಣಿಸಿದ್ದರೆ, ರಿಷಬ್ 348-334 ರಲ್ಲಿ ಪ್ರಜ್ವಲ್ ಅವರನ್ನು ಸೋಲಿಸಿದ್ದರು.ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಐಶ್ವರ್ಯ 369-278 ರಲ್ಲಿ ಮಹಾರಾಷ್ಟ್ರದ ಜೆನಿತಾ ಶಾ ವಿರುದ್ಧ ಸುಲಭ ಗೆಲುವು ಪಡೆದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.