ಅಹಮದಾಬಾದ್: ಕೆಲ ಫೋಟೊ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿರುವ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಬಹಿಷ್ಕರಿಸಿವೆ.

ಹಾಗಾಗಿ ಗುರುವಾರ ಆರಂಭವಾದ ಸರಣಿಯ ಮೊದಲ ಪಂದ್ಯವನ್ನು ಈ ಸುದ್ದಿ ಸಂಸ್ಥೆಗಳು ವರದಿ ಮಾಡುತ್ತಿಲ್ಲ. ಪ್ರಮುಖ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್, ಎಪಿ ಹಾಗೂ ಎಎಫ್ಪಿ ಈ ಕ್ರಮಕ್ಕೆ ಮುಂದಾಗಿವೆ. ಪಂದ್ಯದ ವರದಿ ಮಾಡದಿರಲು ಹಾಗೂ ಫೋಟೊ ತೆಗೆಯದಿರಲು ನಿರ್ಧರಿಸಿವೆ.

ಗೆಟ್ಟಿ ಇಮೇಜಸ್, ಆ್ಯಕ್ಷನ್ ಇಮೇಜಸ್ ಫೋಟೊ ಸಂಸ್ಥೆಗಳಿಗೆ ಬಿಸಿಸಿಐ ನಿರ್ಬಂಧ ವಿಧಿಸಿರುವುದೇ ಇದಕ್ಕೆ ಕಾರಣ. ಈ ಸಂಸ್ಥೆಗಳಿಗೆ ತಾನೇ ಫೋಟೊಗಳನ್ನು ರವಾನಿಸುವುದಾಗಿ ಹೇಳಿರುವ ಬಿಸಿಸಿಐ, ಪಂದ್ಯಗಳನ್ನು ವರದಿ ಮಾಡಲು ಮಾನ್ಯತಾ ಪತ್ರ ನೀಡಿಲ್ಲ. ಕೆಲವು ಸಂಸ್ಥೆಗಳು ಫೋಟೊಗಳನ್ನು ಸಂಪಾದಕೀಯ ಉದ್ದೇಶಕ್ಕೆ ಬಳಸುತ್ತಿಲ್ಲ ಎಂಬುದು ಬಿಸಿಸಿಐ ವಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.