ಶನಿವಾರ, ಮೇ 15, 2021
22 °C

ಟೈಟನ್ ಐಪ್ಲಸ್ ವಹಿವಾಟು ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ `ಟೈಟನ್ ಐ-ಪ್ಲಸ್' ಹೊಸದಾಗಿ 40ರಿಂದ 45 ಮಾರಾಟ ಮಳಿಗೆ ತೆರೆಯುವ ಗುರಿಹೊಂದಿದೆ ಎಂದು `ಟೈಟನ್ ಇಂಡಸ್ಟ್ರೀಸ್ ಲಿ.' ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಹೇಳಿದರು.

ಇಲ್ಲಿ `ಟೈಟನ್ ಗ್ಲೇರ್ಸ್' ಬ್ರಾಂಡ್‌ನ ಹೊಸ ಸನ್‌ಗ್ಲಾಸ್ ಬಿಡುಗಡೆ ಮಾಡಿದ ಅವರು, ಸದ್ಯ 79 ನಗರಗಳಲ್ಲಿ ಟೈಟನ್ ಐ-ಪ್ಲಸ್ 227 ಮಳಿಗೆಗಳಿವೆ ಎಂದರು.ಇತ್ತೀಚಿನ ವರ್ಷಗಳಲ್ಲಿ ಉರಿಬಿಸಿಲು, ಧೂಳಿನ ಸಮಸ್ಯೆ ಹೆಚ್ಚಿದೆ. ದ್ವಿಚಕ್ರ ವಾಹನ ಸವಾರರಿಗೆ ಬಿಸಿಲು, ದೂಳಿನಿಂದ ರಕ್ಷಣೆ ಪಡೆಯಲು, ಜತೆಗೆ ಮುಖವನ್ನು ಚೆಂದಗಾಣಿಸಲು ಗ್ಲೇರ್ಸ್ ಸೂಕ್ತ ಆಯ್ಕೆ. ಟಿಆರ್ 90, ಮೆಗ್ನೀಷಿಯಂ, ಅಲ್ಯುಮಿನಿಯಂ ಬಳಸಿ ಸಿದ್ಧಪಡಿಸಿದ ಈ ಸನ್‌ಗ್ಲಾಸ್ ಸರಣಿ ವಿಶಿಷ್ಟ ವಿನ್ಯಾಸದ ಲ್ಲಿದೆ. ರೂ.1,500ರಿಂದ 2,995ರ ಶ್ರೇಣಿಯಲ್ಲಿ ಲಭ್ಯವಿವೆ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.