ಮಂಗಳವಾರ, ಜೂನ್ 15, 2021
22 °C

ಟೈಟಾನಿಕ್ ದುರಂತಕ್ಕೆ ಚಂದ್ರಮನೂ ಕಾರಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ವೈಭವೋಪೇತ ಹಡಗು ಟೈಟಾನಿಕ್‌ನ ದುರಂತದಲ್ಲಿ ಭೂಮಿಯ ಉಪಗ್ರಹವಾದ ಚಂದ್ರನ ಪಾತ್ರವೂ ಮಹತ್ವದ್ದಾಗಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ!ಸೌದಾಂಪ್ಟ್ಯನ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಹಡಗು 1912ರ ಏಪ್ರಿಲ್ 14ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿ ದುರಂತ ಸಂಭವಿಸಿತ್ತು. ಟೆಕ್ಸಾಸ್ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ತಜ್ಞರ ಪ್ರಕಾರ, ಆ ಸಂದರ್ಭದಲ್ಲಿ,  ಚಂದ್ರನು 1400 ವರ್ಷಗಳಲ್ಲೇ ಮೊದಲ ಬಾರಿಗೆ ಭೂಮಿಯ ಅತ್ಯಂತ ಸಮೀಪಕ್ಕೆ ಬಂದಿದ್ದ. ಹೀಗಾಗಿ ದುರಂತಕ್ಕೆ ಮೂರು ತಿಂಗಳ ಮುನ್ನ, 1912ರ ಜನವರಿ 12ರಂದು ಸಾಗರದಲ್ಲಿ ಪ್ರಚಂಡ ಎತ್ತರದ ಅಲೆಗಳು ಉದ್ಭವವಾಗಿ ಅದರ ಹೊಡೆತಕ್ಕೆ ಸಿಲುಕಿ ಹಿಮಗುಡ್ಡದ ಶಿರೋಭಾಗಗಳು ಪುಡಿಪುಡಿಯಾಗಿದ್ದವು. ಇವು ಶೀಘ್ರ ಕರಗದೆ ಕೆಲವು ತಿಂಗಳುಗಳ ನಂತರವೂ ಹಾಗೆಯೇ ಉಳಿದಿದ್ದವು.  ಟೈಟಾನಿಕ್, ಹೀಗೆ ಮಂಜಿನ ಹೆಪ್ಪುಗಳು ದಟ್ಟೈಸಿದ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿತ್ತು. ಇದರಿಂದಾಗಿ ಜೀವರಕ್ಷಕ ದೋಣಿಗಳಿಗೆ ಕೂಡ ಸಕಾಲದಲ್ಲಿ ಸ್ಥಳಕ್ಕೆ ತೆರಳುವುದು ಕಷ್ಟವಾಯಿತು ಎಂದು ಸಂಶೋಧಕರು ವಿವರಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.