ಭಾನುವಾರ, ಮೇ 16, 2021
28 °C

ಟ್ಯಾಂಕ್ ಶಿಥಿಲ ಅಪಾಯಕ್ಕೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ಯಾಂಕ್ ಶಿಥಿಲ ಅಪಾಯಕ್ಕೆ ಆಹ್ವಾನ

ಯಳಂದೂರು: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಿರ್ಮಿಸಿದ ಮೊದಲ ಓವರ್‌ಹೆಡ್ ಟ್ಯಾಂಕ್ ಶಿಥಿಲಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಬಳಿಯ ಈ ಟ್ಯಾಂಕ್ ನಿರ್ಮಾಣಗೊಂಡು ಹತ್ತಾರು ವರ್ಷ ಕಳೆದಿವೆ. ಆದರೆ, ಕಳೆದ ಕೆಲ ವರ್ಷಗಳಿಂದ ನೀರು ಸೋರಿಕೆಯಾಗುತ್ತಿದೆ. ಟ್ಯಾಂಕಿನ ಕಂಬಗಳು ಹಾಗೂ ತಳಭಾಗದಲ್ಲಿ ಕಬ್ಬಿಣ ಕಂಬಿ ಕಾಣಿಸಿಕೊಳ್ಳುತ್ತಿವೆ. ಆದರೂ, ಕೂಡ ಸಹ ನೀರು ತುಂಬಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ.ಟ್ಯಾಂಕ್ ತಳಭಾಗದಲ್ಲಿ ಕ್ಯಾಂಟೀನ್, ಪೆಟ್ಟಿಗೆ ಅಂಗಡಿಗಳಿವೆ. ನೂರಾರು ಜನ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಆಗಾಗ ಗಾರೆಚೆಕ್ಕೆ ಉದುರಿ ಬೀಳುತ್ತಿವೆ. ಈ ಬಗ್ಗೆ ಹಲವು ಬಾರಿ ದಿನತ್ರಿಕೆಗಳಲ್ಲಿ ವರದಿ ಪ್ರಕಟವಾದರೂ ಸೂಕ್ತ ಕ್ರಮಕೈಗೊಂಡಿಲ್ಲ. ಟ್ಯಾಂಕ್ ನೆಲಸಮ ಮಾಡಲು ಈಗಾಗಲೇ ಸಮೀಕ್ಷೆ ಮಾಡಲಾಗಿದೆ. ಸರ್ಕಾರಿ ನಿಯಮಗಳು ಇದಕ್ಕೆ ಅಡ್ಡಿಯಾಗಿದ್ದು, ಶೀಘ್ರದಲ್ಲೇ ಕ್ರಮ ವಹಿಸುವ ಭರವಸೆ ಇಲ್ಲಿನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀಡುತ್ತಾರೆ.ತಳಭಾಗದ ಚರಂಡಿ ಸಾರ್ವಜನಿಕ ಮೂತ್ರಾಲಯವಾಗಿ ಮಾರ್ಪಟ್ಟಿದೆ. ಈ ಸ್ಥಳ ರೋಗ ಉಲ್ಬಣಕ್ಕೆ ಪೂರಕವಾವಾಗಿದ್ದರೂ ಸ್ಥಳೀಯ ಆಡಳಿತ ಕ್ರಮ ವಹಿಸಿಲ್ಲ.  `ಈ ಟ್ಯಾಂಕ್ ಶಿಥಿಲವಾಗಿದ್ದು, ಅಪಾಯಕಾರಿ' ಎಂದು ನಾಮಫಲಕ ಅಳವಡಿಸಿದ್ದು ಬಿಟ್ಟರೆ ಈವರೆಗೂ ತೆರವಿಗೆ ಕ್ರಮಕೈಗೊಂಡಿಲ್ಲ.`ಆದಷ್ಟು ಬೇಗ ಇದನ್ನು ನೆಲಸಮ ಮಾಡದಿದ್ದರೆ ಅಪಾಯ ಖಚಿತ. ಇದಕ್ಕೆ ಪಟ್ಟಣ ಪಂಚಾಯಿತಿ ಹೊಣೆಯಾಗಲಿದೆ' ಎಂದು ದೂರುತ್ತಾರೆ ಸ್ಥಳೀಯರಾದ ಮಧು, ರಾಜೇಂದ್ರ.

ಕಂಡೂ ಕಾಣದವರು

ಕುಡಿಯುವ ನೀರಿಗಾಗಿ ಸ್ಥಾಪಿಸಿದ ಈ ಟ್ಯಾಂಕ್ ಶಿಥಿಲವಾಗಿ ಹಲವು ವರ್ಷಗಳೇ ಉರುಳಿವೆ. ಕೂಗಳತೆ ದೂರದಲ್ಲಿ ಪಂಚಾಯಿತಿ ಆಡಳಿತ ಕಚೇರಿ ಇದೆ. ಅಧಿಕಾರಿಗಳು ಇದರ ಮುಂಭಾಗದಲ್ಲಿಯೇ ಸಂಚರಿಸುತ್ತಾರೆ. ಆದರೆ, ಇತ್ತ ಯಾರೂ ಗಮನ ಹರಿಸುತ್ತಿಲ್ಲ. ಆ ಕಾಳಜಿ ಯಾರಿಗೂ ಇದ್ದಂತಿಲ್ಲ

ರಾಘವ, ಸ್ಥಳೀಯರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.