ಶನಿವಾರ, ಮೇ 8, 2021
18 °C

ಡಬ್ಬಿಂಗ್ ನಿಷೇಧ ಉಳಿಸಿದ್ದೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಿನಿಮಾ ನಿರ್ಮಾಪಕರ ಸಂಘ ನಟಿ ನಿಖಿತಾ ಮೇಲೆ ಹಾಕಿದ್ದ ನಿಷೇಧವನ್ನು ಹಿಂದೆಗೆದುಕೊಂಡಿರುವುದು ಸ್ವಾಗತಾರ್ಹ.ಸಂಘದ ಅಧ್ಯಕ್ಷರಾದ ಮುನಿರತ್ನರವರು ಇದನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳುವಾಗ

 `ಇನ್ನು ಮೇಲೆ ಕನ್ನಡದಲ್ಲಿ ಬ್ಯಾನ್ ಎಂಬ ಪದಕ್ಕೆ ಬ್ಯಾನ್ ಮಾಡಲಾಗಿದೆ~ ಎಂದು ಹೇಳಿದ್ದಾರೆ.ಆದರೆ ಕನ್ನಡದಲ್ಲಿ ಈಗಾಗಲೇ ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಆದ ಸಿನಿಮಾಗಳಿಗೆ ನಿಷೇಧ ಹೇರಲಾಗಿದೆ. ಒಬ್ಬ ನಟಿಗೆ ಆದ ಅನ್ಯಾಯವನ್ನು ಇಷ್ಟು ಬೇಗ ಸರಿಪಡಿಸಿದ ಚಿತ್ರರಂಗದವರು ಡಬ್ಬಿಂಗ್ ನಿಷೇಧಿಸಿ ಮಾಡಿ ಕನ್ನಡಿಗರಿಗೆ ಬೇಕಾದ ಮನರಂಜನೆಯನ್ನು ಅವರ ನುಡಿಯಾದ ಕನ್ನಡದಲ್ಲಿ ಕೊಡದೆ ಮಾಡುತ್ತಿರುವ ಅನ್ಯಾಯವನ್ನು ಬೇಗನೆ ಸರಿಪಡಿಸುತ್ತಾರೆಯೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.