ಸೋಮವಾರ, ಜೂನ್ 1, 2020
27 °C

ಡಬ್ಲುಟಿಒದಲ್ಲಿ ಅಮೆರಿಕದ ವಿರುದ್ಧ ಭಾರತಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿನಿವಾ (ಪಿಟಿಐ): ಕೋಳಿ ಉತ್ಪನ್ನಗಳ ಆಮದಿಗೆ ಸಂಬಂಧಿಸಿದಂತೆ ವಿಶ್ವವಾಣಿಜ್ಯ ಸಂಸ್ಥೆಯಲ್ಲಿ (ಡಬ್ಲುಟಿಒ) ಭಾರತಕ್ಕೆ ಅಮೆರಿಕದ ವಿರುದ್ಧ ಸೋಲಾಗಿದೆ.ಹಕ್ಕಿಜ್ವರದ ಕಾರಣ ಮಂದೊಡ್ಡಿ  ಭಾರತವು ಅಮೆರಿಕದಿಂದ ಬರುವ ಕೋಳಿ ಉತ್ಪನ್ನಗಳಿಗೆ ನಿಷೇಧ ಹೇರಿತ್ತು.ಆದರೆ, ವಿಶ್ವ ವಾಣಿಜ್ಯ ಸಂಸ್ಥೆಯ ಪರಿಶೀಲನಾ ಸಮಿತಿಯು ಭಾರತ ಹೇರಿರುವ ನಿಷೇಧ ಅಂತರರಾಷ್ಟ್ರೀಯ ನಿಯಮಾವಳಿಗೆ ಅನುಗುಣವಾಗಿಲ್ಲ ಎಂದು ಹೇಳಿದೆ.ಹಕ್ಕಿಜ್ವರದ ಭೀತಿ ಇರುವ ಇನ್ಯಾವುದೇ ದೇಶದ ಕೋಳಿ ಉತ್ಪನ್ನದ ಮೇಲೆ ಭಾರತ ನಿಷೇಧ ಹೇರಿಲ್ಲ. ಕೇವಲ ಅಮೆರಿಕದ ಉತ್ಪನ್ನಗಳನ್ನು ನಿರ್ಬಂಧಿಸಿದೆ. ಅಲ್ಲದೇ ಕೋಳಿ ಉತ್ಪನ್ನ ಆಮದಿನಿಂದ ಆಗುವ ಅಪಾಯ ಏನು ಎಂಬುದರ ಕುರಿತು ಅಧ್ಯಯನ ನಡೆಸಿಲ್ಲ ಎಂದು ಪರಿಶೀಲನಾ ಸಮಿತಿ ಹೇಳಿದೆ.ಡಬ್ಲುಟಿಒ ನಿರ್ಧಾರವನ್ನು ಜಾರಿಗೊಳಿಸಲು ಭಾರತಕ್ಕೆ 12ರಿಂದ 18 ತಿಂಗಳ ಕಾಲಾವಕಾಶವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.