ಬುಧವಾರ, ಫೆಬ್ರವರಿ 19, 2020
20 °C

ಡಬ್ಲ್ಯುಎಂಒ ಮಹಾ ಕಾರ್ಯದರ್ಶಿ ಹುದ್ದೆಗೆ ಶೈಲೇಶ್‌ ನಾಯಕ್‌ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿನೀವಾ (ಪಿಟಿಐ): ಭಾರತದ ಶೈಲೇಶ್‌ ನಾಯಕ್‌ ಅವರು ವಿಶ್ವ  ಹವಾಮಾನ ಸಂಸ್ಥೆಯ (ಡಬ್ಲ್ಯುಎಂಒ) ಮಹಾ
ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲಿದ್ದಾರೆ.

‘ಡಬ್ಲ್ಯುಎಂಒನ ಮುಂದಿನ ಕಾರ್ಯದರ್ಶಿ ಯಾರು ಎಂಬುದನ್ನು ಗುರುವಾರ ನಿರ್ಧರಿಸಲಾಗುವುದು’ ಎಂದು ಸಂಸ್ಥೆಯ ವಕ್ತಾರ ಕ್ಲೇರ್‌ ನಲಿಸ್‌ ಹೇಳಿದ್ದಾರೆ.

‘ಈ ಹುದ್ದೆಗೆ ನಾಲ್ಕು ಆಕಾಂಕ್ಷಿಗಳಿದ್ದಾರೆ.  ದಕ್ಷಿಣ ಆಫ್ರಿಕಾದ ಜೆರ್ರಿ ಲೆಂಗೋಸಾ, ರಷ್ಯಾದ ಎಲೆನಾ ಮನಯೆಂಕೋವಾ, ಭಾರತದ ಶೈಲೇಶ್‌ ನಾಯಕ್‌ ಮತ್ತು ಫಿನ್ಲೆಂಡ್‌ನ ಪೆಟ್ರಿ ಟಲಾಸ್‌ ಅವರು ಸ್ಪರ್ಧಿಸುವುದು ಖಚಿತ’ ಎಂದು ಅವರು ತಿಳಿಸಿದ್ದಾರೆ.

‘ಡಾ. ಶೈಲೇಶ್‌ ನಾಯಕ್‌ ಡಬ್ಲ್ಯುಎಂಒನ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾರತದ ಸ್ಪರ್ಧಿಯಾಗಿರುವರು’ ಎಂದು ಡಬ್ಲ್ಯುಎಂಒನ  ಕೇಂದ್ರ ಕಚೇರಿಯಲ್ಲಿರುವ ಭಾರತದ ಪ್ರತಿನಿಧಿಗಳ ತಂಡ ಸೋಮವಾರ ‘ಟ್ವೀಟ್‌’ ಮಾಡಿತ್ತು.

ಗುಜರಾತ್‌ ಮೂಲದ ನಾಯಕ್‌ 2000ದವರೆಗೆ ಇಸ್ರೋದಲ್ಲಿ ಸೇವೆ ಸಲ್ಲಿಸಿದ್ದರು. ಹೈದರಾಬಾದ್‌ನಲ್ಲಿರುವ ಭಾರತೀಯ ರಾಷ್ಟ್ರೀಯ ಸಮುದ್ರ ಮಾಹಿತಿ ಸೇವೆಗಳ ಕೇಂದ್ರದ ನಿರ್ದೇಶಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)