ಮಂಗಳವಾರ, ಏಪ್ರಿಲ್ 13, 2021
32 °C

ಡಾಕ್ಟರ್ ಅಂಕಿತಾ

ಸಂದರ್ಶನ: ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಡಾಕ್ಟರ್ ಅಂಕಿತಾ

ಮಾಡೆಲಿಂಗ್‌ಗೆ ಬರುವ ಮುನ್ನ?

ಹುಟ್ಟಿದ್ದು ದೆಹಲಿಯಲ್ಲಿ. ಎಂಬಿಬಿಎಸ್ ಓದುವ ಅವಕಾಶ ಸಿಕ್ಕಿದ್ದು ಬೆಂಗಳೂರಿನಲ್ಲಿ. ಓದಿನ ಜತೆಗೇ ಮಾಡೆಲಿಂಗ್ ಅವಕಾಶ ಕೈಬೀಸಿ ಕರೆಯಿತು. ವೈದ್ಯೆಯಾಗುವುದರೊಂದಿಗೆ ಮಾಡೆಲಿಂಗ್‌ನಲ್ಲೂ ಮಿಂಚಬೇಕೆನ್ನುವುದು ನನ್ನ ಆಸೆ.ಎಷ್ಟು ಶೋಗಳನ್ನು ನೀಡಿದ್ದೀರಿ?

ಮಾಡೆಲಿಂಗ್‌ನಲ್ಲಿ ತೊಡಗಿಕೊಂಡಿರುವುದು ಮೂರು ವರ್ಷಗಳ ಹಿಂದಷ್ಟೇ. ಇದುವರೆಗೂ ಹಲವು ಶೋಗಳನ್ನು ನೀಡಿದ್ದೇನೆ. ವಸ್ತ್ರ, ಆಭರಣ, ಇನ್ನೂ ಹಲವು ಉತ್ಪನ್ನಗಳ ಪ್ರದರ್ಶನಕ್ಕೆಂದು ರ‌್ಯಾಂಪ್ ಮೇಲೆ ಹೆಜ್ಜೆ ಇಟ್ಟ ಅನುಭವವಿದೆ.ಈ ಕ್ಷೇತ್ರದಲ್ಲಿ ಪಡೆದುಕೊಂಡ ಅನುಭವಗಳು?

ಸಮಾಜದಲ್ಲಿ ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಗೌರವ ಕಡಿಮೆ. ಆದರೆ ಮಾಡೆಲಿಂಗ್ ಕೂಡ ಒಂದು ವೃತ್ತಿ. ಅದನ್ನು ಗೌರವಿಸಿ. ನೂರಾರು ಮಂದಿ ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿರುವಂತೆ ಇಲ್ಲಿಯೂ ನಮ್ಮನ್ನು   ತಪ್ಪು ಹಾದಿಗೆ ಕೊಂಡೊಯ್ಯುವವರು ಇರಬಹುದು. ಆದರೆ ಅವರ ಕೈಯ್ಯಲ್ಲಿ ಸಿಲುಕಬಾರದು. ಈ ಕ್ಷೇತ್ರಕ್ಕೆ ಗಾಡ್ ಫಾದರ್ ಇಲ್ಲದೆ ಬಂದರೆ ತುಂಬಾ ಕಷ್ಟ.ಓದು- ಮಾಡೆಲಿಂಗ್ ನಡುವೆ ಮನೆಯವರ ಬೆಂಬಲ ಹೇಗಿತ್ತು?

ಅಪ್ಪನಿಗೆ ನನ್ನನ್ನು ರೂಪದರ್ಶಿಯಾಗಿ ನೋಡಲು ಇಷ್ಟವಿರಲಿಲ್ಲ. ವೈದ್ಯೆಯಾಗಿ ಮಾತ್ರ ನೋಡಲು ಬಯಸಿದ್ದರು. ಓದುತ್ತಿದ್ದಾಗ ಸಿಕ್ಕ ಮಾಡೆಲಿಂಗ್ ಅವಕಾಶವೂ ನನ್ನನ್ನು ಸೆಳೆಯಿತು. ಆ ಸಮಯದಲ್ಲಿ ಅಮ್ಮ ಬೆಂಬಲ ನೀಡಿದರು. ಈಗ ಓದಿನೊಂದಿಗೆ ಮಾಡೆಲಿಂಗ್‌ನಲ್ಲೂ ನನ್ನ ಛಾಪು ಮೂಡಿಸುವ ಪ್ರಯತ್ನದಲ್ಲಿದ್ದೇನೆ.ಮಾಡೆಲಿಂಗ್‌ನಲ್ಲಿ ಆಗಿರುವ ಬದಲಾವಣೆ?

ಮಾಡೆಲಿಂಗ್ ಬಗ್ಗೆ ಆಗ ಜನರಲ್ಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಆದರೆ ಈಗ ಸ್ವಲ್ಪ ಬದಲಾವಣೆಯಾಗಿದೆ ಎನ್ನಬಹುದು. ಈಗ ಈ ಕ್ಷೇತ್ರಕ್ಕೆ ಬರುವವರೂ ಹೆಚ್ಚಿದ್ದಾರೆ. ಅವಕಾಶವೂ ಹೆಚ್ವಿದೆ. ಮಾರುಕಟ್ಟೆಗೆ ಹೊಸದೊಂದು ಉತ್ಪನ್ನ ಬಿಡುಗಡೆ ಮಾಡಬೇಕಾದರೆ, ರೂಪದರ್ಶಿಗಳಿಂದ ಅದನ್ನು ಪ್ರಸ್ತುತ ಪಡಿಸಿದರೆ, ಪರಿಣಾಮ ಹೆಚ್ಚು ಎಂಬುದನ್ನು ಅರಿತುಕೊಂಡಿದ್ದಾರೆ.ರೂಪದರ್ಶಿಯಾಗಲು ಸ್ಫೂರ್ತಿ?

ಅನುಷ್ಕಾ ಶರ್ಮಾ ಮಾಡೆಲಿಂಗ್‌ಗೆ ಬರಲು ಸ್ಫೂರ್ತಿ. ಆಕೆಯ ಸೌಂದರ್ಯ, ಆಂಗಿಕ ಅಭಿನಯ ನನ್ನ ಮೇಲೆ ಪ್ರಭಾವ ಬೀರಿತು. ಅಂತೆಯೇ ಕೃತಿಕಾ ಎಂಬ ರೂಪದರ್ಶಿ ನನ್ನನ್ನು ಮಾಡೆಲಿಂಗ್ ಪ್ರಪಂಚದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದು.ವಸ್ತ್ರವಿನ್ಯಾಸಕರಲ್ಲಿ ಯಾರಿಷ್ಟ? ಯಾವ ಉಡುಪು ಇಷ್ಟ?

ವಿನ್ಯಾಸಕರಲ್ಲಿ ಅನಿತಾ ಡೋಂಗ್ರೆ ಇಷ್ಟ. ನಾವು ಬಟ್ಟೆ ತೊಡುತ್ತೀವಿ ಎಂದಾದರೆ, ಅದು ಕಂಫರ್ಟೆಬಲ್ ಆಗಿರಬೇಕು. ನನಗೆ ಸೀರೆ, ಘಾಗ್ರ, ಲೆಹಂಗಾ ಎಂದರೆ ಅಚ್ಚುಮೆಚ್ಚು.ಬೆಂಗಳೂರಿನಲ್ಲಿ ಮಾಡೆಲಿಂಗ್ ಅವಕಾಶ ಹೇಗಿದೆ?

ಅವಕಾಶ ಚೆನ್ನಾಗಿದೆ. ಆದರೆ ಉತ್ತರ ಭಾರತೀಯರಿಗಿಂತ ದಕ್ಷಿಣ ಭಾರತದವರಿಗೆ ಇಲ್ಲಿ ಅವಕಾಶ ಹೆಚ್ಚು.ಫಿಟ್‌ನೆಸ್ ಕಾಪಾಡಿಕೊಂಡಿದ್ದು ಹೇಗೆ?

ಡಯಟ್ ಮಾಡುತ್ತೇನೆ. ಡಯಟ್ ಅಂದರೆ ಹಸಿದುಕೊಂಡಿರಬೇಕೆಂದು ಅರ್ಥವಲ್ಲ. ಹಸಿದುಕೊಂಡಿದ್ದರೆ ಮುಖದ ಕಾಂತಿ ಕುಂದುತ್ತದೆ. 2 ಗಂಟೆಗೊಮ್ಮೆ ಜ್ಯೂಸ್, ಹಣ್ಣು, ತರಕಾರಿಗಳನ್ನು ಸೇವಿಸುತ್ತಿರಬೇಕು. ಪ್ರತಿನಿತ್ಯ ವ್ಯಾಯಾಮ ಮಾಡುತ್ತೇನೆ. ಯೋಗಾ ಕೂಡ ಮಾಡುತ್ತೇನೆ. ಇದರಿಂದ ದೈಹಿಕ, ಮಾನಸಿಕವಾಗಿ ಫಿಟ್ ಆಗಿರುತ್ತೇನೆ.ಮೆಚ್ಚಿನ ನಟ, ನಟಿ? ಸಿನಿಮಾಗಳಿಂದ ಅವಕಾಶ ಸಿಕ್ಕಿದೆಯೇ?


ಬಾಲಿವುಡ್‌ನಲ್ಲಿ ನನಗೆ ಯಾರೂ ಇಷ್ಟವಿಲ್ಲ. ಆದರೆ ಹಾಲಿವುಡ್ ನಟ ನಟಿಯರು, ಅವರ ನಟನೆ, ಸೌಂದರ್ಯ ಮೆಚ್ಚುಗೆಯಾಗುತ್ತದೆ. ನಟಿಯರಲ್ಲಿ ದಕ್ಷಿಣ ಭಾರತದ ಅನುಷ್ಕಾ ಶರ್ಮಾ ತುಂಬಾ ಇಷ್ಟ.  ಸದ್ಯಕ್ಕೆ ಓದು, ಮಾಡೆಲಿಂಗ್ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ್ದರಿಂದ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದರೆ ಮಾಡೆಲಿಂಗ್‌ನಲ್ಲಿ ಮಿಂಚುವ ಕನಸು ನನ್ನದು.ಮಾಡೆಲಿಂಗ್‌ನಲ್ಲಿನ ಸವಾಲುಗಳು?


ಮಾಡೆಲಿಂಗ್‌ನಲ್ಲಿ ಫಿಟ್‌ನೆಸ್ ಮತ್ತು ತ್ವಚೆಯ ಕಾಂತಿಯನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಅದರಂತೆಯೇ ನಮ್ಮನ್ನು ಇಲ್ಲಿ ಗುರುತಿಸಿಕೊಳ್ಳುವುದೂ ತುಂಬಾ ಮುಖ್ಯ. ಇಲ್ಲವಾದರೆ ನಾವು ಮೂಲೆಗುಂಪಾಗುತ್ತೇವೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.