ಬೆಂಗಳೂರು: ಇತ್ತೀಚೆಗೆ ತಮ್ಮ ವಿದ್ಯಾರ್ಥಿನಿಯನ್ನೇ ಮದುವೆಯಾಗಿ ಮೊದಲ ಪತ್ನಿ ಭಾಗ್ಯಲಕ್ಷ್ಮಮ್ಮ ಅವರಿಂದ ಒದೆ ತಿಂದಿದ್ದ, ಬೆಂಗಳೂರು ವಿಶ್ವವಿದ್ಯಾಲಯದ ಗ್ರಾಮೀಣಾಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಟಿ.ಎಚ್.ಮೂರ್ತಿ ಅವರ ವೇತನದ ಅರ್ಧ ಪಾಲನ್ನು ಮೊದಲ ಪತ್ನಿಯ ಜೀವನೋಪಾಯಕ್ಕಾಗಿ ನೀಡುವ ಕುರಿತಂತೆ ಮಂಗಳವಾರ ನಡೆದ ವಿಶೇಷ ಸಿಂಡಿಕೇಟ್ ಸಭೆ ನಿರ್ಧಾರ ಕೈಗೊಂಡಿದೆ.

ಭಾಗ್ಯಲಕ್ಷ್ಮಮ್ಮ ನೀಡಿದ ದೂರಿನ ಮೇರೆಗೆ ಮತ್ತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಮಹಿಳಾ ದಕ್ಷತಾ ಸಮಿತಿ ಹಾಗೂ ಬೆಂಗಳೂರು ವಿವಿ ವಕೀಲರ ಕಾನೂನು ಸಲಹೆಯಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ.

ವಿಚಾರಣೆ ಆರಂಭವಾಗಿ ಮುಗಿಯುವವರೆಗೂ ತಮ್ಮ ಪತಿಯ ವೇತನದ ಅರ್ಧ ಪಾಲನ್ನು ಪಡೆಯುವ ಹಕ್ಕನ್ನು ಭಾಗ್ಯಲಕ್ಷ್ಮಮ್ಮ ಅವರಿಗೆ ಸಿಂಡಿಕೇಟ್ ಈ ಮೂಲಕ ನೀಡಿದೆ. ವಿವಿಗಳ ವಿವಿಧ ವೃತ್ತಿಪರ ಶಿಕ್ಷಣದ ಕೋರ್ಸುಗಳನ್ನು ಅಧ್ಯಯನ ಮಾಡಿ ವಿವಿಯಲ್ಲಿ ಅಳವಡಿಸಿಕೊಳ್ಳುವ ಕುರಿತಂತೆ ವರದಿ ಸಲ್ಲಿಸಲು ಕರ್ನಾಟಕ ದೂರಶಿಕ್ಷಣ ನಿರ್ದೇಶನಾಲಯದ ಸದಸ್ಯ ಪ್ರೊ.ಚಂಬಿ ಪುರಾಣಿಕ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸಭೆ ನಿರ್ಧರಿಸಿತು.

ನಗರದಲ್ಲಿರುವ ಸುಮಾರು ಎಂಟು ರಾಷ್ಟ್ರೀಯ ಮಟ್ಟದ ವಿಜ್ಞಾನ ಸಂಸ್ಥೆಗಳೊಂದಿಗೆ ಪರಸ್ಪರ ಬೌದ್ಧಿಕ ಮತ್ತು ಯೋಜನಾ ಸಾಮಗ್ರಿಗಳ ಬಳಕೆಗೆ ಅನುವಾಗುವ ನಿಟ್ಟಿನಲ್ಲಿ ಒಪ್ಪಂದವೊಂದಕ್ಕೆ ಬರಲು ಸಮ್ಮತಿ ನೀಡಿದೆ. ‘ಬೆಂಗಳೂರು ಸಂಶೋಧನೆ ಮತ್ತು ಶೈಕ್ಷಣಿಕ ಒಕ್ಕೂಟ’ದ (ಬಿಆರ್ಇಐಸಿ) ಮೂಲಕ ಈ ಕುರಿತ ಪ್ರಸ್ತಾವಕ್ಕೆ ಸಮ್ಮತಿ ನೀಡಲಾಯಿತು. ಎಂಟು ನಗರದ ರಾಷ್ಟ್ರೀಯ ಸಂಸ್ಥೆಗಳ ತಜ್ಞರು ವಿವಿಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಒಪ್ಪಂದ ಅನುಕೂಲ ಕಲ್ಪಿಸಲಿದ್ದು, ಸಂಶೋಧನಾ ವಿದ್ಯಾರ್ಥಿಗಳು ಈ ಸಂಸ್ಥೆಗಳ ಪಾಠೋಪಕರಣಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.