ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಡಾನ್ ಬೋಸ್ಕೋ ಅವಶೇಷಕ್ಕೆ ಅದ್ದೂರಿ ಸ್ವಾಗತ

Published:
Updated:

ದೇವದುರ್ಗ: ಸಂತ ಡಾನ್ ಬೋಸ್ಕೋ ಅವರ ದ್ವಿತೀಯ ಜನ್ಮಶತಮಾನೋತ್ಸವ ಅಂಗವಾಗಿ ಅವರ ಬಲಗೈ ಅವಶೇಷ ಶನಿವಾರ ಪಟ್ಟಣಕ್ಕೆ ಆಗಮಿಸಿದಾಗ ಡಾನ್ ಬೋಸ್ಕೋ ವಿದ್ಯಾ ಸಂಸ್ಥೆಯ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.ರಾಯಚೂರು ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದ ಫಾದರ್, ಮತ್ತು ಸಿಸ್ಟರ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಶ್ರದ್ಧಾಂಜಲಿ: ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಪಿ. ಶ್ರೀನಿವಾಸ ಕಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರು ಹಾಗೂ ವಿವಿಧ ಗಣ್ಯರು ಡಾನ್ ಬೋಸ್ಕೋ ವಿದ್ಯಾ ಸಂಸ್ಥೆಗೆ ಆಗಮಿಸಿ ಶ್ರದ್ಧಾಂಜಲಿ ಸಲ್ಲಿಸಿದರು.ಸಾರ್ವಜನಿಕರ ದರ್ಶನ: ಅವಶೇಷವನ್ನು ಸಂಸ್ಥೆಯ ಅವರಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಸಂಜೆ 5.30ವರೆಗೆ ಇಡಲಾಗಿತ್ತು. ಭಾನುವಾರ ಬೆಳಗಿನ ಜಾವ 5.30ಕ್ಕೆ ದೇವದುರ್ಗದಿಂದ ಯಾದಗರಿ ಪಟ್ಟಣಕ್ಕೆ ಅವಶೇಷವನ್ನು ಕಳುಹಿಸಲಾಗುವುದು ಎಂದು ಸಂಸ್ಥೆ ನಿರ್ದೇಶಕ ಹಾಗೂ ಪ್ರಾಚಾರ್ಯ ಸ್ವಾಮಿ ಕೆ.ಸಿ. ಮ್ಯಾಥ್ಯು ತಿಳಿಸಿದರು. ವ್ಯವಸ್ಥಾಪಕ ಸ್ವಾಮಿ ಸಜಿ ಜಾರ್ಚ್ ಅವರು ಉಪಸ್ಥಿತರಿದ್ದರು.

 

Post Comments (+)