ಭಾನುವಾರ, ಮೇ 22, 2022
27 °C

ಡಿಜಿಟಲ್ ಪಬ್ಲಿಷಿಂಗ್ ಕುರಿತು ಉಪನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದ ಬರಹಗಾರರಿಗೆ `ಡಿಜಿಟಲ್ ಪಬ್ಲಿಷಿಂಗ್~ ತಂತ್ರಜ್ಞಾನವನ್ನು ಪರಿಚಯ ಮಾಡಿಕೊಡುವ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಮತ್ತು ಮೇರಾ ಲೈಬ್ರರಿ ಡಾಟ್ ಕಾಂ (meralibrary.com) ಸಹಯೋಗದಲ್ಲಿ ಭಾನುವಾರ (ಜೂ. 3) ಏರ್ಪಡಿಸಲಾಗಿದೆ. ಕಂಪ್ಯೂಟರ್ ತಜ್ಞ ಡಾ. ಯು.ಬಿ. ಪವನಜ ಉಪನ್ಯಾಸ ನೀಡಲಿದ್ದು, ಡಾ. ಸಿ. ವೀರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮ ಅಂದು ಸಂಜೆ 4ರಿಂದ 7 ಗಂಟೆವರೆಗೆ ವಿಜಯನಗರದ 15 ನೇ ಮುಖ್ಯರಸ್ತೆಯಲ್ಲಿರುವ (ವಿಜಯನಗರ ಕ್ಲಬ್ ಎದುರಿನ ರಸ್ತೆ) ಪರಿಷತ್ತಿನ ಪಂಪ ಸಭಾಂಗಣದಲ್ಲಿ ನಡೆಯಲಿದೆ.

ನಾವು ಓದುವ ಪುಸ್ತಕಗಳ ಹೊಸ ರೂಪವೇ `ಇ-ಪುಸ್ತಕ~. ಈ ತಂತ್ರಜ್ಞಾನದಲ್ಲಿ ಡಿಜಿಟಲ್ ಲೈಬ್ರರಿಗೆ ತಮ್ಮ ಪುಸ್ತಕಗಳನ್ನು ಸೇರಿಸುವುದು ಹೇಗೆ ಎಂಬುದನ್ನು ಪರಿಚಯ ಮಾಡಿಕೊಳ್ಳಬಯಸುವ ಎಲ್ಲ ಆಸಕ್ತ ಲೇಖಕರಿಗೂ ಸ್ವಾಗತವಿದೆ.

ಅದೇ ಭಾನುವಾರ ಬೆಳಿಗ್ಗೆ 10.30ಕ್ಕೆ ಪಂಪ ಸಭಾಂಗಣದಲ್ಲಿ ಪರಿಷತ್ತು ಆರಂಭಿಸಿರುವ `ಕನ್ನಡ ಸಾಹಿತ್ಯ: ಇಂದಿನ ಸ್ಥಿತಿ-ಗತಿ~ ಉಪನ್ಯಾಸ ಮಾಲೆಯಲ್ಲಿ  `ಕನ್ನಡ ಸಣ್ಣಕಥೆ~ ಕುರಿತು ಡಾ. ಕಾ.ವೆಂ ಶ್ರೀನಿವಾಸ ಮೂರ್ತಿ ಮಾತನಾಡಲಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.