ಬೆಂಗಳೂರು: ಎಂಜಿನಿಯರಿಂಗ್ (ಬಿ.ಇ) ಪ್ರವೇಶಕ್ಕೆ ಡಿಪ್ಲೊಮಾ ಅಭ್ಯರ್ಥಿಗಳಿಗೆ ಸಿಇಟಿ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ತಾಂತ್ರಿಕ ವಿದ್ಯಾರ್ಥಿಗಳ ಒಕ್ಕೂಟ, ರಾಜ್ಯ ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಮಲ್ಲೇಶ್ವರದ ಸಿಇಟಿ ಘಟಕದ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, `ಎಂಟು ವರ್ಷದಿಂದ ಸಿಇಟಿ ನಡೆಸಿಕೊಂಡು ಬರಲಾಗಿತ್ತು. ಕಳೆದ ವರ್ಷದ ವರೆಗೆ ತಾಂತ್ರಿಕ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸುತ್ತಾ ಬಂದಿತ್ತು. ಸಿಇಟಿ ನಡೆಸುವಂತೆ ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರ್ಕಾರ ನಿರ್ದೇಶನ ನೀಡಿತ್ತು.

ಆದರೆ ಪರೀಕ್ಷೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಅಧಿಕಾರಿಗಳು ಸ್ಪಷ್ಟ ಉತ್ತರ ನೀಡುತ್ತಿಲ್ಲ~ ಎಂದು ದೂರಿದರು.`ಮೇ ಅಂತ್ಯದಲ್ಲಿ ಪರೀಕ್ಷಾ ದಿನಾಂಕವನ್ನು ಘೋಷಿಸಬೇಕಿತ್ತು. ಈ ವರೆಗೂ ಪರೀಕ್ಷಾ ದಿನಾಂಕ ಘೋಷಿಸದ ಹಿನ್ನೆಲೆಯಲ್ಲಿ ಈ ಬಾರಿ ಸಿಇಟಿ ಇಲ್ಲ ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಕಾಡುತ್ತಿದೆ. ಸರ್ಕಾರ ಕೂಡಲೇ ಗೊಂದಲ ನಿವಾರಣೆ ಮಾಡಬೇಕು~ ಎಂದು ಆಗ್ರಹಿಸಿದರು.

`ರಾಜ್ಯದಾದ್ಯಂತ 167 ಪಾಲಿಟೆಕ್ನಿಕ್ ಕಾಲೇಜುಗಳಿದ್ದು, ಪ್ರತಿವರ್ಷ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಸಿಇಟಿ ನಡೆಸದಿದ್ದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಸಿಇಟಿ ನಡೆಸುವುದು ಬಿಡುವುದು ಆಯಾ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ತಾಂತ್ರಿಕ ಶಿಕ್ಷಣದ ಅಖಿಲ ಭಾರತ ಒಕ್ಕೂಟವು ತಿಳಿಸಿದೆ. ಸರ್ಕಾರ ಸಕಾರಣ ನೀಡದೆ ಸಿಇಟಿ ನಡೆಸದೆ ಇರುವುದು ತಪ್ಪು~ ಎಂದು ಅವರು ಪ್ರತಿಪಾದಿಸಿದರು.

ಒಕ್ಕೂಟದ ಕಾರ್ಯದರ್ಶಿ ಧನಂಜಯ ಎಂ.ವಿ. ಮಾತನಾಡಿ, `ಕೋಚಿಂಗ್ ದಂಧೆಗೆ ಸರ್ಕಾರ ಕಡಿವಾಣ ಹಾಕಬೇಕು. ಅದನ್ನು ಬಿಟ್ಟು ಸಿಇಟಿ ನಿಲ್ಲಿಸುವುದು ಸೂಕ್ತ ಅಲ್ಲ. ಕೋಚಿಂಗ್ ಕೇಂದ್ರಗಳ ನಿಲ್ಲಿಸಲು ಸರ್ಕಾರ ಮುಂದಾದರೆ ಒಕ್ಕೂಟ ಬೆಂಬಲ ನೀಡಲಿದೆ~ ಎಂದರು.

`ಹೆಚ್ಚಿನ ಪಾಲಿಟೆಕ್ನಿಕ್ಗಳಲ್ಲಿ ಮೂಲ ಸೌಕರ್ಯ ಹಾಗೂ ಉಪನ್ಯಾಸಕರ ಕೊರತೆ ಇದೆ. ತಾಂತ್ರಿಕ ಉಪಕರಣಗಳ ಸಂಖ್ಯೆ ಕಡಿಮೆ ಇದೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಈ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು~ ಎಂದು ಅವರು ಆಗ್ರಹಿಸಿದರು.

`ಮುಂದಿನ ವರ್ಷದಿಂದ ರಾಷ್ಟ್ರದಾದ್ಯಂತ ಸಿಇಟಿ ನಡೆಸುವುದಾಗಿ ತಾಂತ್ರಿಕ ಶಿಕ್ಷಣದ ಅಖಿಲ ಭಾರತ ಒಕ್ಕೂಟ ಘೋಷಿಸಿದೆ. ಅದೇ ಹೊತ್ತಿನಲ್ಲಿ ರಾಜ್ಯ ಸರ್ಕಾರ ಸಿಇಟಿ ನಿಲ್ಲಿಸಲು ಮುಂದಾಗಿರುವುದು ಖಂಡನೀಯ~ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ರಶ್ಮಿ ಅವರು ಮನವಿ ಸ್ವೀಕರಿಸಿ ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.