ಗುರುವಾರ , ಜೂನ್ 17, 2021
26 °C

ಡಿವಿಷನ್ ಪಂದ್ಯಗಳು ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರೀಡಾಂಗಣದಲ್ಲಿ ಆಡುತ್ತಲೇ ಡಿ. ವೆಂಕಟೇಶ್ ಮೃತಪಟ್ಟಹಿನ್ನೆಲೆಯಲ್ಲಿ ಸೂಪರ್ ಡಿವಿಷನ್ ಹಾಗೂ `ಎ~ ಡಿವಿಷನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯಗಳನ್ನು ಮುಂದೂಡಲಾಗಿದೆ.`ಕನಿಷ್ಠ ಇನ್ನೂ 15ರಿಂದ 20 ದಿನಗಳ ಕಾಲ ಡಿವಿಷನ್ ಪಂದ್ಯಗಳು ನಡೆಯುವುದಿಲ್ಲ. ನಂತರ ನಡೆಸುವ ಬಗ್ಗೆ ಯೋಚನೆ ಮಾಡಲಾಗುವುದು~ ಎಂದು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಮೂಲಗಳು ತಿಳಿಸಿವೆ.ವೆಂಕಟೇಶ್ ಸಾವಿನ ಘಟನೆ ಐ ಲೀಗ್ ಫುಟ್‌ಬಾಲ್ ಪಂದ್ಯದ ಮೇಲೂ ಪರಿಣಾಮ ಬೀರಲಿದೆ. ಮಾರ್ಚ್ 31ರಂದು ಎಚ್‌ಎಎಲ್ ಹಾಗೂ ಪಿಲ್ಲಾನ್ ಆ್ಯರೋಸ್ ತಂಡಗಳ ನಡುವೆ 22ನೇ ಸುತ್ತಿನ ಫುಟ್‌ಬಾಲ್ ಪಂದ್ಯವು ಇದೇ ಕ್ರೀಡಾಂಗಣದಲ್ಲಿ  ನಡೆಯಬೇಕಿತ್ತು. ಇದು ಸಹ ಏಪ್ರಿಲ್ 28ಕ್ಕೆ ಮುಂದೂಡಲಾಗಿದೆ~ ಎಂದು ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಮೂಲಗಳು ಹೇಳಿವೆ.ಈ ತರಹದ ಘಟನೆ ಮರುಕಳಿಸಬಾರದು ಎನ್ನುವ ಉದ್ದೇಶದಿಂದ ಎಲ್ಲಾ ಸವಲತ್ತುಗಳನ್ನು ಕಲ್ಪಿಸಿದ ನಂತರ ಪಂದ್ಯಗಳನ್ನು ಆಯೋಜಿಸಲು ಬಿಡಿಎಫ್‌ಎ ನಿರ್ಧರಿಸಿದೆ. ಈ ಸಲದ ಟೂರ್ನಿ ಆರಂಭವಾಗಿ ಎರಡನೆ ದಿನವೇ ಈ ದುರಂತ ಸಂಭವಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.