ಸೋಮವಾರ, ಜನವರಿ 27, 2020
15 °C

ಡಿ. 9ರಂದು ಕೆಜೆಪಿ ಕಾರ್ಯಕಾರಿಣಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ರಾಜ್ಯ ಕಾರ್ಯಕಾರಿಣಿ ಸಭೆ ಡಿ.9ರಂದು ನಗರದಲ್ಲಿ ನಡೆಯಲಿದೆ. ಕಳೆದ ವರ್ಷ ಇದೇ ದಿನ ಹಾವೇರಿ­ಯಲ್ಲಿ ಪಕ್ಷದ ಮೊದಲ ಸಮಾವೇಶ ಆಯೋಜಿಸಲಾಗಿತ್ತು. ಅದರ ಅಂಗ­ವಾಗಿ ಈ ಸಭೆ ನಡೆಯಲಿದ್ದು, ಒಂದು ವರ್ಷದಲ್ಲಿ ಪಕ್ಷದ ಬೆಳವಣಿಗೆಯ ಅವಲೋಕನ, ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.ಕೆಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂ­ರಪ್ಪ ಅವರನ್ನು ಬಿಜೆಪಿಗೆ ಮರುಸೇರ್ಪಡೆ ಮಾಡಿಕೊಳ್ಳುವ ಕುರಿತು ನಡೆದಿರುವ ಬೆಳವಣಿಗೆಗಳ ಬಗ್ಗೆಯೂ ಸಭೆಯಲ್ಲಿ  ಚರ್ಚೆ ನಡೆಯಲಿದೆ. ಆದರೆ, ಅಧಿಕೃತವಾಗಿ ಬಿಜೆಪಿಯಿಂದ ಆಹ್ವಾನ ಬರುವವರೆಗೂ ಯಾವುದೇ  ತೀರ್ಮಾನ ಕೈಗೊಳ್ಳದಿರುವಂತೆ ಮುಖಂಡರು ನಿರ್ಣಯ ಕೈಗೊಳ್ಳುವ ಸಾಧ್ಯತೆಗಳಿವೆ. ಎನ್‌ಡಿಎಗೆ ಬೆಂಬಲ ಸೂಚಿಸಿ ಬಿಎಸ್‌ವೈ ಬರೆದಿರುವ ಪತ್ರಕ್ಕೆ ಇದು­ವರೆಗೆ ಉತ್ತರ ಬಾರದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.

ಬಿಎಸ್‌ವೈ ಬಿಜೆಪಿ ಸೇರ್ಪಡೆ: ‘ಮಾಹಿತಿ ಇಲ್ಲ’

‘ಕೆಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿಗೆ ಮರುಸೇರ್ಪಡೆ­ಯಾಗುವ ವಿಷಯ ಅಥವಾ ಅವರಿಗೆ ಆಹ್ವಾನ ನೀಡಿರುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಮಾಧ್ಯಮಗಳ ಮೂಲಕ ಬಿಜೆಪಿ ಮುಖಂಡರು ಆಮಂತ್ರಣ ನೀಡುತ್ತಿರುವುದು ವಿಚಿತ್ರ’ .

-ಧನಂಜಯಕುಮಾರ್‌, ಕೆಜೆಪಿ ಮುಖಂಡ.

ಪ್ರತಿಕ್ರಿಯಿಸಿ (+)