ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಡೀಸೆಲ್ ಮಾರಾಟದಿಂದ ಪ್ರತಿ ಲೀಟರ್‌ಗೆ ಎದುರಿಸುತ್ತಿರುವ ನಷ್ಟವು ಈಗ ್ಙ 6.08 ಆಗಿದ್ದು, ಶೀಘ್ರದಲ್ಲಿಯೇ ಬೆಲೆ ಹೆಚ್ಚಳಗೊಳ್ಳುವ ಸಾಧ್ಯತೆಗಳಿವೆ.

ಇದೇ 22ರಂದು ಇಲ್ಲಿ ಸಭೆ ಸೇರಲಿರುವ ಸಚಿವರ ಅಧಿಕಾರ ಸಮಿತಿಯು ಪ್ರತಿ ಲೀಟರ್‌ಗೆ ್ಙ 2ರಂತೆ ಹೆಚ್ಚಿಸುವುದನ್ನು ಚರ್ಚಿಸುವ ನಿರೀಕ್ಷೆ ಇದೆ. ಆದರೆ, ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ನೇತೃತ್ವದ ಈ ಸಮಿತಿಯು ಬುಧವಾರ ಸಭೆ ಸೇರಿ ನಿರ್ಧಾರ ಕೈಗೊಳ್ಳುವುದು ಇದುವರೆಗೆ ದೃಢಪಟ್ಟಿಲ್ಲ.

ಸಾರಿಗೆ ಇಂಧನದ ಚಿಲ್ಲರೆ ಮಾರಾಟ ಬೆಲೆ ಮತ್ತು ಆಮದು ವೆಚ್ಚದ ಮಧ್ಯೆ ಇರುವ ಅಂತರ ತಗ್ಗಿಸಲು ಡೀಸೆಲ್ ಬೆಲೆ ಏರಿಸುವುದನ್ನು ಚರ್ಚಿಸುವುದು ಸಚಿವರ ಅಧಿಕಾರ ಸಮಿತಿಯ ಸಭೆಯ ಕಾರ್ಯಸೂಚಿಯಲ್ಲಿ ಇದೆ.

ಸದ್ಯಕ್ಕೆ ತೈಲ ಮಾರಾಟ ಸಂಸ್ಥೆಗಳು ಪ್ರತಿ ಲೀಟರ್ ಡೀಸೆಲ್‌ಗೆ ಎದುರಿಸುತ್ತಿರುವ ್ಙ 6.08ರಷ್ಟು ನಷ್ಟ ಕಡಿಮೆ ಮಾಡುವ ಚಿಂತನೆ ನಡೆಯುತ್ತಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‌ಗಳು ಸದ್ಯಕ್ಕೆ ಡೀಸೆಲ್ ಮಾರಾಟದಿಂದ ಪ್ರತಿ ದಿನ ್ಙ 105 ಕೋಟಿ ನಷ್ಟಕ್ಕೆ ಎರವಾಗುತ್ತಿವೆ.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 90 ಡಾಲರ್‌ನಂತೆ ಮಾರಾಟವಾಗುತ್ತಿದೆ. ಇದರಿಂದ ದೇಶಿ ಮಾರುಕಟ್ಟೆಯಲ್ಲಿನ ಚಿಲ್ಲರೆ ಮಾರಾಟ ಬೆಲೆ ಮತ್ತು ಆಮದು ವೆಚ್ಚದ ಮಧ್ಯೆ ಅಂತರ ಹೆಚ್ಚುತ್ತಿದೆ.

ತೈಲ ಮಾರಾಟ ಸಂಸ್ಥೆಗಳು ಡೀಸೆಲ್ ಅಲ್ಲದೇ ಸೀಮೆಎಣ್ಣೆ ಮಾರಾಟದಿಂದ ಪ್ರತಿ ಲೀಟರ್‌ಗೆ ್ಙ17.72 ಮತ್ತು ಅಡುಗೆ ಅನಿಲ (ಎಲ್‌ಪಿಜಿ) ಮಾರಾಟದಿಂದ ಪ್ರತಿ ಸಿಲಿಂಡರ್‌ಗೆ ್ಙ 272.19ರಷ್ಟು ನಷ್ಟಕ್ಕೆ ಗುರಿಯಾಗುತ್ತಿವೆ.

ಕಳೆದ ವಾರ ಪೆಟ್ರೋಲ್ ಬೆಲೆಯನ್ನು ್ಙ 2.94ರಿಂದ ್ಙ 2.96ರಷ್ಟು ಹೆಚ್ಚಿಸಿದ್ದರೂ, ಚಿಲ್ಲರೆ ಮಾರಾಟ ಬೆಲೆಯು ಆಮದು ವೆಚ್ಚಕ್ಕೆ ಹೋಲಿಸಿದರೆ ಇನ್ನೂ ್ಙ 1.20 ರಿಂದ ್ಙ1.25ರಷ್ಟು ಕಡಿಮೆ ಇದೆ.

ಜೂನ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಶೇ 98ರಷ್ಟು ಪಾಲು ಹೊಂದಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬೆಲೆ ಪರಿಷ್ಕರಿಸುವ ಮುನ್ನ ಅನೌಪಚಾರಿಕವಾಗಿ ಕೇಂದ್ರ ಸರ್ಕಾರವನ್ನು ಸಂಪರ್ಕಿಸುತ್ತವೆ.

ಡೀಸೆಲ್ ಬೆಲೆಯನ್ನೂ ಹಂತ ಹಂತವಾಗಿ ಮಾರುಕಟ್ಟೆಯೇ ನಿರ್ಧರಿಸುವ (ನಿಯಂತ್ರಣ ಮುಕ್ತಗೊಳಿಸುವ) ಬಗ್ಗೆ ಸರ್ಕಾರ ಈಗಾಗಲೇ ನಿರ್ಧರಿಸಿದೆ.
ಸದ್ಯದ ಕಚ್ಚಾ ತೈಲದ ಬೆಲೆ ಮಟ್ಟದಲ್ಲಿ ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸುವುದು ಸಾಧ್ಯವಿಲ್ಲ ಎಂದು ಅಧಿಕೃತ ಮೂಲಗಳು ಅಭಿಪ್ರಾಯಪಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.