ಶುಕ್ರವಾರ, ಮೇ 27, 2022
22 °C

ಡೆಂಗೆ: ಸಂಜಯನಗರ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಜಯನಗರದ ನಿವಾಸಿ ವಿಜಯಕುಮಾರ್ (19) ಡೆಂಗೆ ಜ್ವರದಿಂದ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಭಾನುವಾರಮೃತಪಟ್ಟರು.ಕಳೆದ ಒಂದು ವಾರದಿಂದ ತೀವ್ರವಾದ ಜ್ವರ ಹಾಗೂ ಬಳಲಿಕೆ ಕಂಡುಬಂದಿತ್ತು. ಅಲ್ಲದೇ ರಕ್ತದಲ್ಲಿ ಪ್ಲೇಟ್‌ಲೆಟ್ಸ್ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು. ಆರಂಭದಲ್ಲಿ ಮನೆಯ ಸಮೀಪವಿದ್ದ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ್ವರದ ತೀವ್ರತೆ  ಹೆಚ್ಚಾಗಿದ್ದರಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ಸಂಬಂಧಿಕ ಆನಂದ್ ತಿಳಿಸಿದರು.`ಪ್ರಾಥಮಿಕ ವರದಿಯಿಂದ ಡೆಂಗೆಯೆಂದು ದೃಢಪಟ್ಟಿದ್ದು, ಪ್ಲೇಟ್‌ಲೆಟ್ಸ್ ಸಂಖ್ಯೆ ಕಡಿಮೆಯಾಗಿದ್ದರಿಂದ ಹೆಚ್ಚಿನ ಪ್ಲೇಟ್‌ಲೆಟ್ಸ್ ಪೂರೈಸಿದ್ದೆವು' ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.