ಡ್ರಾ ಪಂದ್ಯದಲ್ಲಿ ಸೌತ್ ಯುನೈಟೆಡ್

ಬೆಂಗಳೂರು: ಸುಭಾಷ್ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಸೌತ್ ಯುನೈ ಟೆಡ್ ತಂಡ ಇಲ್ಲಿ ನಡೆಯುತ್ತಿರುವ ಬಿಡಿ ಎಫ್ಎ ವತಿಯ ಸೂಪರ್ ಡಿವಿಷನ್ ಲೀಗ್ ಫುಟ್ಬಾಲ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಡಿವೈಇಎಸ್ ಎದುರು ಡ್ರಾ ಮಾಡಿಕೊಂಡಿದೆ.
ಸೌತ್ ಯುನೈಟೆಡ್ 1–1 ಗೋಲಿನಿಂದ ಡಿವೈಇಎಸ್ ಎದುರು ಡ್ರಾ ಸಾಧಿಸಿದೆ.
29ನೇ ನಿಮಿಷದಲ್ಲಿ ಡಿವೈಇಎಸ್ ತಂಡದ ಸಂತೋಷ್ ಗೋಲು ಗಳಿಸಿದರು. ಬಳಿಕ ಸೌತ್ ಯುನೈಟೆಡ್ ತಂಡದ ಸುಭಾಷ್ (39ನೇ ನಿ.) ಚೆಂಡನ್ನು ಗುರಿ ಸೇರಿಸುವ ಮೂಲಕ ಸಮಬಲಕ್ಕೆ ಕಾರಣರಾದರು.
ಎಜಿಒಆರ್ಸಿ ತಂಡಕ್ಕೆ ಜಯ: ‘ಎ’ ಡಿವಿಷನ್ ಪಂದ್ಯದಲ್ಲಿ ಎಜಿಒಆರ್ಸಿ 1–0 ಗೋಲಿನಿಂದ ಎಲ್ಆರ್ಡಿಇ ತಂಡವನ್ನು ಮಣಿಸಿದೆ.
ಮುರಳೀಧರನ್ (32ನೇ ನಿ.) ಗೋಲು ತಂದಿತ್ತು ಎಜಿಒಆರ್ಸಿ ತಂಡದ ಗೆಲುವಿನ ರೂವಾರಿ ಎನಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.