ಅರಕಲಗೂಡು: ಪಟ್ಟಣದ ಪೇಟೆ ಮುಖ್ಯ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ನೆಪದಲ್ಲಿ ಕಾನೂನು ಬಾಹಿರವಾಗಿ ವಾಸದ ಮನೆ, ಅಂಗಡಿಗಳನ್ನು ಪ.ಪಂ ಧ್ವಂಸಗೊಳಿಸುತ್ತಿದ್ದು, ಕೂಡಲೇ ಇದಕ್ಕೆ ತಡೆ ಒಡ್ಡುವಂತೆ ಆಗ್ರಹಿಸಿ ಇಲ್ಲಿನ ನಿವಾಸಿಗಳ ತಂಡ ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ರಸ್ತೆ ವಿಸ್ತರಣೆ ನೆಪದಲ್ಲಿ ಪಟ್ಟಣ ಪಂಚಾಯತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಇಲ್ಲಿನ ನಿವಾಸಿ ಗಳಿಗೆ ನೋಟಿಸ್ ಜಾರಿಗೊಳಿಸದೆ ಯಂತ್ರದ ಸಹಾಯದಿಂದ ಒಡೆದು ಹಾಕುತ್ತಿದ್ದಾರೆ. ಪ.ಪಂ. ಈ ಕಾರ್ಯದ ಬಗ್ಗೆ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದು, ಅದು ವಿಚಾರಣೆ ಹಂತದಲ್ಲಿದೆ. ಹೀಗಿದ್ದರೂ ಪ.ಪಂ. ತನ್ನ ಕಾರ್ಯಾಚರಣೆ ಮುಂದುವ ರಿಸಿದೆ. ನೂರಾರು ವರ್ಷಗಳಿಂದ ಈ ರಸ್ತೆಯಲ್ಲಿ ವಾಸದ ಮನೆ, ಅಂಗಡಿಗಳನ್ನು ನಿರ್ಮಿಸಿ ಕೊಂಡು ಜೀವನ ನಿರ್ವಹಣೆ ಮಾಡು ತ್ತಿದ್ದ ಜನರು ಈ ಕಾರ್ಯಾಚರಣೆ ಯಿಂದ ಬೀದಿಗೆ ಬಿದ್ದಿದ್ದಾರೆ. ಜಿಲ್ಲಾಧಿ ಕಾರಿ ಕೂಡಲೇ ಈ ಕಾರ್ಯಚರಣೆ ನಿಲ್ಲಿಸಲು ಆದೇಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ಪ್ರಕರಣದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ತಕ್ಷಣ ವರದಿ ನೀಡುವಂತೆ ಅರಕಲಗೂಡು ತಹಶೀಲ್ದಾರ್ಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದಿದೆ. ಯಾವ ಕಾರಣಕ್ಕಾಗಿ ಅಂಗಡಿ, ಮನೆಗಳ ತೆರವು ನಡೆಯು ತ್ತಿದೆ. ಇದು ಕಾನೂನು ಬದ್ಧವಾಗಿ ದೆಯೇ? ಎನ್ನುವ ಕುರಿತು ವರದಿ ನೀಡುವಂತೆ ತಿಳಿಸಿದ್ದಾರೆ. ಅದರಂತೆ ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಲಾಗುವುದು ಎಂದು ತಹಶೀ ಲ್ದಾರ್ ಎಂ.ಕೆ. ಸವಿತ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.