ಭಾನುವಾರ, ಮೇ 9, 2021
27 °C

ತಮಿಳುನಾಡು ಮಹಿಳೆ ಸಾರಥ್ಯ:ಇಂದು ರಿಸ್ಯಾಟ್-1 ಉಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಐಎಎನ್‌ಎಸ್): ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೊ, ಗುರುವಾರ  ದೂರಸಂವೇದಿ ರಾಡಾರ್ ಬಿಂಬಗ್ರಾಹಿ (ಇಮೇಜಿಂಗ್) ಉಪಗ್ರಹವನ್ನು (ರಿಸ್ಯಾಟ್-1) ಉಡಾವಣೆ ಮಾಡಲಿದೆ.

ಈ ಉಪಗ್ರಹ ಯೋಜನೆಯ ನಿರ್ದೇಶಕರಾಗಿ ದುಡಿದವರು ಮಹಿಳೆ ಎನ್ನುವುದು ವಿಶೇಷ. ತಮಿಳುನಾಡಿನ ಎನ್. ವಳರ್‌ಮತಿ ಅವರು ಈ ಉಪಗ್ರಹ ಯೋಜನೆಯ ನಿರ್ದೇಶಕಿ.`ಉಪಗ್ರಹ ಕಾರ್ಯಕ್ರಮದ ನಿರ್ದೇಶಕಿಯಾಗಿ, ಉಪಗ್ರಹದ ಉಡಾವಣೆ ಮತ್ತು ಅದರ ಕಾರ್ಯನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ವಳರ್‌ಮತಿ ಅವರ ಮೇಲಿದೆ~ ಎಂದು ಹೆಸರು ಹೇಳಲು ಇಚ್ಛಿಸದ  ಇಸ್ರೊ ಅಧಿಕಾರಿಯೊಬ್ಬರು ಹೇಳಿದ್ದಾರೆ.ಒಟ್ಟು 1,858 ಕೆ.ಜಿ ತೂಕದ  ರಿಸ್ಯಾಟ್-1ನ ಕಾರ್ಯ ನಿರ್ವಹಣೆಯ ಅವಧಿ ಐದು ವರ್ಷಗಳು. ವಿಪತ್ತುಗಳ  ಮುನ್ಸೂಚನೆ, ಕೃಷಿ ಅರಣ್ಯ ಮಾಹಿತಿ ಪಡೆಯಲು ಈ ಉಪಗ್ರಹವನ್ನು ಬಳಸಬಹುದು. ಅತ್ಯಂತ ಸ್ಪಷ್ಟವಾದ ಚಿತ್ರಗಳು ಮತ್ತು ಸೂಕ್ಷ್ಮತರಂಗ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಉಪಗ್ರಹಕ್ಕೆ ಇರುವುದರಿಂದ ರಕ್ಷಣಾ ಉದ್ದೇಶಕ್ಕೂ ಇದನ್ನು ಬಳಸಬಹುದು.ಇಸ್ರೊ 2009ರಲ್ಲಿ ರಿಸ್ಯಾಟ್-2 ಉಪಗ್ರಹವನ್ನು ಉಡಾವಣೆ ಮಾಡಿತ್ತುವಳರ್‌ಮತಿ ಅವರು ಇಸ್ರೊದ ಉಪಗ್ರಹ ಕಾರ್ಯಕ್ರಮವೊಂದರ ನಿರ್ದೇಶಕರಾಗಿ ದುಡಿದ ಎರಡನೇ ಮಹಿಳೆಯಾಗಿದ್ದಾರೆ. ಆದರೆ ದೂರ ಸಂವೇದಿ ಉಪಗ್ರಹ ಯೋಜನೆಯೊಂದರ ಮೊದಲ ನಿರ್ದೇಶಕಿ ಎಂಬ ಹೆಗ್ಗಳಿಗೆ ಅವರದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.