ತಮಿಳುನಾಡು ಸಚಿವ ಕರುಪ್ಪಸ್ವಾಮಿ ನಿಧನ

7

ತಮಿಳುನಾಡು ಸಚಿವ ಕರುಪ್ಪಸ್ವಾಮಿ ನಿಧನ

Published:
Updated:

ಚೆನ್ನೈ (ಪಿಟಿಐ): ತಮಿಳುನಾಡು ಸಚಿವ ಸಿ. ಕರುಪ್ಪಸ್ವಾಮಿ (57 ) ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕರುಪ್ಪಸ್ವಾಮಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮೃತರು ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಮುಖ್ಯಮಂತ್ರಿ ಜಯಲಲಿತಾ ಅವರ ಕ್ಯಾಬಿನೆಟ್ ಸಚಿವರಲ್ಲಿ ಮೃತಪಟ್ಟವರಲ್ಲಿ ಕರುಪ್ಪಸ್ವಾಮಿ ಎರಡನೆಯವರು. ಈ ಹಿಂದೆ ಮತ್ತೊಬ್ಬ ಸಚಿವ ಮರಿಯಮ್ ಪಿಚೈ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಕರುಪ್ಪಸ್ವಾಮಿ ಅವರು ಎಐಡಿಎಂಕೆಯ ಸಂಘಟನಾ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

 


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry