ನಾಯಕನಹಟ್ಟಿ: ಸಕಾಲಕ್ಕೆ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಿ ಮಕ್ಕಳನ್ನು ಮಾರಕ ಕಾಯಿಲೆಗಳಿಂದ ರಕ್ಷಿಸಿ ಎಂದು ಜಿ.ಪಂ. ಸದಸ್ಯೆ ಜಯಮ್ಮ ಬಾಲರಾಜ್ ಸಲಹೆ ನೀಡಿದರು.

ಸಮೀಪದ ನೆಲಗೇತನಹಟ್ಟಿಯಲ್ಲಿ ಶನಿವಾರ ಸಮುದಾಯ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಮಹಿಳೆಯರು ಹೆಚ್ಚಾಗಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಜಮೀನುಗಳಲ್ಲಿ ಸೊಪ್ಪು, ತರಕಾರಿ ಬೆಳೆಯುವ ನೀವೇ ಹೆಚ್ಚಾಗಿ ಅವುಗಳನ್ನು ಸೇವಿಸದಿದ್ದರೆ ಹೇಗೆ? ವೈದ್ಯಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮಹಿಳೆಯರಿಗೆ ನೀಡಿರಿ. ಬರೀ ಕಾರ್ಯಕ್ರಮಗಳಿಂದ ಏನು ಪ್ರಯೋಜನವಿಲ್ಲ. ಕಾರ್ಯಾಗಾರಗಳನ್ನು ಏರ್ಪಡಿಸಿ, ಮಹಿಳೆಯರಲ್ಲಿ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ಮಾತನಾಡಿ, ವೈಯಕ್ತಿಕ ಸ್ವಚ್ಛತೆಯಿಂದ ಮಾರಕ ರೋಗಗಳನ್ನು ತಡೆಗಟ್ಟಲು ಸಾಧ್ಯ. ಆದ್ದರಿಂದ, ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನವಿರಲಿ. ಮಹಿಳೆಯರು ಈ ಬಗ್ಗೆ ಗಮನ ನೀಡಬೇಕು. ಇಂದು ವಿದ್ಯಾವಂತ ಕುಟುಂಬಗಳಲ್ಲೇ ಲಿಂಗ ತಾರತಮ್ಯ ಹೆಚ್ಚಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷರಿಗೆ 969 ಮಹಿಳೆಯರು ಇದ್ದಾರೆ. ಬುದ್ದಿ ಹೇಳುವವರೇ ಹೀಗಾದರೆ ಅನಕ್ಷರಸ್ಥರ ಪಾಡೇನು ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಚುಚ್ಚುಮದ್ದು, ಹಾಗೂ ಲಿಂಗ ತಾರತಮ್ಯ ಬಗ್ಗೆ ರೂಪಕ ಪ್ರದರ್ಶಿಸಿದರು.

ತಾ.ಪಂ. ಸದಸ್ಯೆ ಪಾಲಮ್ಮ, ವೈದ್ಯಾಧಿಕಾರಿ ಡಾ.ನಳಿನಿ, ಗ್ರಾ.ಪಂ. ಸದಸ್ಯ ಬಸವರಾಜ ನಾಯ್ಕ ಹಾಜರಿದ್ದರು. ಗ್ರಾ.ಪಂ. ಅಧ್ಯಕ್ಷ ಹನುಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈ. ತಿಪ್ಪೇಶ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ ತಳಕು: ಇಲ್ಲಿ ಶನಿವಾರ ನಡೆದ ಸಮುದಾಯ ಆರೋಗ್ಯ ದಿನವನ್ನು ಜಿ.ಪಂ. ಸದಸ್ಯೆ ಭಾಗ್ಯಲಕ್ಷ್ಮೀ ಉದ್ಘಾಟಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ನೋಡೆಲ್ ಅಧಿಕಾರಿ ಡಾ.ರಮೇಶ್ ಬಾಬು ಮಾತನಾಡಿ, ಸಮುದಾಯ ಆರೋಗ್ಯದಿನವನ್ನು ಎರಡು ದಿನ ಏರ್ಪಡಿಸಿ ಜನರಿಂದ ಸಲಹೆಗಳನ್ನು ಪಡೆದು ಅದರಂತೆ ಕಾರ್ಯಕ್ರಮ ರೂಪಿಸಲಾಗುವುದು. ಜತೆಗೆ, ಆರೋಗ್ಯ ಇಲಾಖೆಯಿಂದ ಜಾರಿಯಾದ ವಿವಿಧ ಯೋಜನೆ ಜನಸಾಮಾನ್ಯರಿಗೆ ಯಾವರೀತಿ ತಲುಪುತ್ತಿವೆ ಎಂಬುದನ್ನು ಪರೀಕ್ಷಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದರು.

ಇದೇ ವೇಳೆ ಇಲಾಖಾವತಿಯಿಂದ ಜಾರಿಯಾದ ಕಾರ್ಯಕ್ರಮಗಳ ಪ್ರಗತಿಯನ್ನು ಪರೀಕ್ಷಿಸಿ, ಜನರಿಂದ ಸಲಹೆ ಪಡೆದುಕೊಂಡರು.

ಜಿ.ಪಂ. ಸದಸ್ಯೆ ಭಾಗ್ಯಲಕ್ಷ್ಮೀ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಬಹಳಷ್ಟಿದೆ. ಮಹಿಳೆಯರಲ್ಲಿ ಆರೋಗ್ಯದ ಅರಿವನ್ನು ಮೂಡಿಸಲು ನೀವು ಅವಿರತವಾಗಿ ಶ್ರಮಿಸಿರಿ ಎಂದು ಸಲಹೆ ನೀಡಿದರು.

ತಾ.ಪಂ. ಸದಸ್ಯೆ ಜಯಲಕ್ಷ್ಮೀ, ಗ್ರಾ.ಪಂ. ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಲೋಕ್ಯಾನಾಯ್ಕ, ವೈದ್ಯಾಧಿಕಾರಿ ಡಾ.ರಾಘವೇಂದ್ರ ಸಭೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ರೈತ ಸಂಘದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.