ಬುಧವಾರ, ಜನವರಿ 22, 2020
28 °C

ತರೀಕೆರೆ: ಗರ್ಭಿಣಿಯರ ಅನುಕೂಲಕ್ಕೆ ಆಂಬುಲೆನ್ಸ್‌್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ:  ಗರ್ಭಿಣಿಯರ ಅನುಕೂಲ­ಕ್ಕಾಗಿ ನೂತನ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕ ಆಸ್ಪತ್ರೆಯನ್ನು ಮತ್ತಷ್ಟು ಆಧುನೀಕರಣ­ಗೊಳಿಸಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನೂತನ ಸುಸಜ್ಜಿತ ಆಂಬುಲೆನ್ಸ್ ಅನ್ನು ಗರ್ಭಿಣಿಯರ ಉಪಯೋಗಕ್ಕಾಗಿ ಚಾಲನೆ ನೀಡಿ ಮಾತನಾಡಿದರು.ಆಸ್ಪತ್ರೆಗೆ ಅಗತ್ಯ ಇರುವ ಮೂಲ ಸೌಕರ್ಯ ಹಾಗೂ ಖಾಲೀ ಇರುವ ವೈದ್ಯರನ್ನು ಸದ್ಯದಲ್ಲಿಯೇ ಭರ್ತಿ ಮಾಡ­ಲಾಗುವುದು ಎಂದರು.

ಕೇವಲ ಜಿಲ್ಲಾ ಆಸ್ಪತ್ರೆಗೆ ಸೀಮಿತ ಇದ್ದ ಡಯಾಲಿಸಿಸ್ ವ್ಯವಸ್ಥೆ ಕೇಂದ್ರ­ವನ್ನು ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಮಂಜೂರು ಮಾಡಿಸಲಾಗಿದ್ದು ಸದ್ಯ­ದಲ್ಲಿಯೇ ರೋಗಿಗಳಿಗೆ ಈ ಸೌಲಭ್ಯ ದೊರೆಯಲಿದೆ ಎಂದರು.ಆಸ್ಪತ್ರೆಯಲ್ಲಿನ ರೋಗಿಗಳಿಗೆ ಮತ್ತು ಅವರ ಜೊತೆ ಬರುವವರಿಗೆ ಊಟದ ವ್ಯವಸ್ಥೆ ಮಾಡಲು ಅಗತ್ಯ ಇರುವ ಕೊಠಡಿಗೆ ಶಾಸಕರ ನಿಧಿಯಿಂದ 3 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ದೇವ­ರಾಜ್, ಉಪವಿಭಾಗಾಧಿ­ಕಾರಿ ಜಿ.­ಅನುರಾಧಾ, ಸಿಡಿಪಿಒ ಶ್ರೀಧರ್, ವೈದ್ಯಾಧಿ­ಕಾರಿ ಮಲ್ಲಿಕಾರ್ಜನಪ್ಪ, ಡಾ.ಶಿವಮೂರ್ತಿ, ಡಾ.ರವಿಕೀರ್ತಿ, ಮುಖಂಡರಾದ ರವಿಶಾನುಭೋಗ್, ಹೇಮಲತಾ, ಫಾರೂಕ್, ಪುರಸಭೆ ಸದಸ್ಯ ಪದ್ಮರಾಜ್ ಇದ್ದರು.

ಪ್ರತಿಕ್ರಿಯಿಸಿ (+)