ಸೋಮವಾರ, ಮಾರ್ಚ್ 1, 2021
30 °C
ಕ್ಯಾಲಿಫೋರ್ನಿಯಾ ವಿವಿ ಪ್ರಾಧ್ಯಾಪಕರ ಸಂಶೋಧನೆ

ತಲೆ ಎಣಿಕೆಗೆ ವೈಫೈ ಸೇವೆ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಲೆ ಎಣಿಕೆಗೆ ವೈಫೈ ಸೇವೆ ಬಳಕೆ

ಲಾಸ್ ಏಂಜಲೀಸ್ (ಪಿಟಿಐ): ವೈಫೈ ತಂತ್ರಜ್ಞಾನ ಬಳಸಿಕೊಂಡು ಒಂದು ನಿಗದಿತ ಸ್ಥಳದಲ್ಲಿ ಇರುವ ಜನರ ಸಂಖ್ಯೆ ಯನ್ನು ಲೆಕ್ಕಹಾಕುವ ವಿಧಾನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಪ್ರಕೃತಿ ವಿಕೋಪ ಮತ್ತಿತರ ಅವಘಡಗಳು ಸಂಭವಿಸಿದಾಗ ರಕ್ಷಣಾ ಕಾರ್ಯ ಕೈಗೊಳ್ಳಲು ಈ ವಿಧಾನ ನೆರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.‘ಕೇವಲ ಎರಡು ವೈಫೈ ಕೊಂಡಿಗಳ ನಡುವೆ ಹರಿದಾಡುವ ಸಂಕೇತಗಳ ಆಧಾ ರದ ಮೇಲೆ, ಒಂದು ಸ್ಥಳದಲ್ಲಿ ನಡೆದಾ ಡುತ್ತಿರುವ ಜನರ ಸಂಖ್ಯೆಯನ್ನು ಲೆಕ್ಕ ಹಾಕುವುದು ನಮ್ಮ ಗುರಿ’ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿ ಯರಿಂಗ್ ವಿಭಾಗದ ಪ್ರಾಧ್ಯಾಪಕ  ಯಸಾಮಿನ್ ಮೊಸ್ಟೊಫಿ ಹೇಳಿದ್ದಾರೆ.‘ಹೀಗೆ ಲೆಕ್ಕ ಹಾಕಲು, ಸ್ಥಳದಲ್ಲಿ ಓಡಾಡುತ್ತಿರುವ ಜನರು ವೈಫೈ ಸೌಲಭ್ಯ ಇರುವ ಸಾಧನವನ್ನು ಹೊಂದಿರಬೇಕಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಸುಮಾರು 70 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ, ವಿರುದ್ಧ ದಿಕ್ಕಿನಲ್ಲಿ ಎರಡು ವೈಫೈ ಕಾರ್ಡ್‌ಗಳನ್ನು ಅಳವಡಿಸಲಾಗುತ್ತದೆ. ಎರಡೂ ಕಾರ್ಡ್‌ಗಳ ನಡುವೆ ಸಂಕೇತಗಳು ಹರಿದಾಡುತ್ತಿರುತ್ತವೆ. ಎರಡು ಕಾರ್ಡ್‌ಗಳ ನಡುವೆ ಓಡಾಡುವ ಮಂದಿಯ ಮೇಲೆ ಬೀಳುವ ಸಂಕೇತಗಳ ತರಂಗಗಳು ಚದುರುತ್ತವೆ. ಹೀಗೆ ಚದುರುವ ತರಂಗ ಗಳ ಆಧಾರದ ಮೇಲೆ ಆ ಸ್ಥಳದಲ್ಲಿರುವ ಜನರ ಸಂಖ್ಯೆಯನ್ನು ಲೆಕ್ಕಹಾಕಲಾಗು ತ್ತದೆ’ ಎಂದು ಮೊಸ್ಟೊಫಿ ವಿವರಿಸಿದ್ದಾರೆ.

*

ಎಲ್ಲೆಲ್ಲಿ ಬಳಸಬಹುದು

ಮನೆಗಳಲ್ಲಿ, ಸ್ಮಾರ್ಟ್ ಕಟ್ಟಡ ಗಳಲ್ಲಿ, ಸಾರ್ವಜನಿಕ ಸ್ಥಳಗ ಳಲ್ಲಿ ಈ ತಾಂತ್ರಿಕತೆಯನ್ನು ಬಳಸ ಬಹುದು ಎಂದು ಯಸಾಮಿನ್ ಮೊಸ್ಟೊಫಿ ಹೇಳಿದ್ದಾರೆ.ಈ ತಾಂತ್ರಿಕತೆ ಅಳವಡಿಸಿದ ಹವಾನಿಯಂತ್ರಿತ ಕಟ್ಟಡಗಳಲ್ಲಿ, ಅಲ್ಲಿರುವ ಜನರ ಸಂಖ್ಯೆಯನ್ನು ಆಧರಿಸಿ ಉಷ್ಣತೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬಹುದು ಎಂದು ಅವರು ಉದಾಹರಿಸಿದ್ದಾರೆ.ಅಲ್ಲದೆ ಬಹುಮುಖ್ಯವಾಗಿ ಪ್ರಕೃತಿ ವಿಕೋಪ ಮತ್ತು ಇತರೆ ಅವಘಡಗಳು ಸಂಭವಿಸಿದ ವೇಳೆ, ಒಂದು ಕಟ್ಟಡ ದಲ್ಲಿ ಅಥವಾ ಸ್ಥಳದಲ್ಲಿ ಇದ್ದ ಜನರ ಸಂಖ್ಯೆಯನ್ನು ಲೆಕ್ಕಹಾಕಬಹುದು. ಇದರಿಂದ ರಕ್ಷಣಾ ಕಾರ್ಯಾ ಚರಣೆ ಕೈಗೊಳ್ಳಲು ನೆರವಾ ಗುತ್ತದೆ ಎಂದು ಹೇಳಿದ್ದಾರೆ.

*

ಮುಖ್ಯಾಂಶಗಳು

*ಎರಡು ವೈಫೈ ಸಂಪರ್ಕಗಳ ನಡುವೆ ಓಡಾಡುವ ಜನರ ಲೆಕ್ಕ

*ಜನರು ವೈಫೈ ಸೌಲಭ್ಯದ ಸಾಧನ ಹೊಂದಿರಬೇಕಿಲ್ಲ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.