ಮಂಗಳವಾರ, ಮೇ 11, 2021
26 °C

ತಾಯಂದಿರಿಗೆ ಮಾನಸಿಕ ನೆಮ್ಮದಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮಹಿಳೆಯರಿಗೆ, ಗರ್ಭಿಣಿಯರಿಗೆ ಹಾಗೂ ತಾಯಂದಿರಿಗೆ ಪೌಷ್ಟಿಕ ಆಹಾರದೊಂದಿಗೆ ಮಾನಸಿಕ ನೆಮ್ಮದಿ ಅಗತ್ಯ ಎಂದು ಡಾ. ರಾಧಿಕಾ ಕುಲಕರ್ಣಿ ಹೇಳಿದರು.ಇನ್ನರ್ ವೀಲ್ ಸಂಸ್ಥೆ ವತಿಯಿಂದ ಇತ್ತೀಚೆಗೆ ರೋಟರಿ ಐ ಕೇರ್ ಕೇಂದ್ರದಲ್ಲಿ ಏರ್ಪಡಿಸಿದ್ದ ಆರೋಗ್ಯವಂತ ಚಿಕ್ಕಮಕ್ಕಳ ಸ್ಪರ್ಧೆಯ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಮಹಿಳೆಯರು ಸಮತೋಲನ ಆಹಾರ ಸೇವಿಸುವ ಮೂಲಕ ಆರೋಗ್ಯವನ್ನು ಸದೃಢವಾಗಿಟ್ಟುಕೊ ಳ್ಳಬೇಕು. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕು ಎಂದು ಸಲಹೆ ನೀಡಿದರು.ಸಂಸ್ಥೆಯ ಅಧ್ಯಕ್ಷೆ ಆಶಾ ಪಟ್ಟಣಶೆಟ್ಟಿ ಮಾತನಾಡಿ, ತಾಯಿಯೇ ಮಕ್ಕಳಿಗೆ ಮೊದಲ ಗುರು. ಈ ನಿಟ್ಟಿನಲ್ಲಿ ತಾಯಂದಿರು ಸೌಖ್ಯವಾಗಿದ್ದಾಗ ಮಾತ್ರ ಮಕ್ಕಳು ಆರೋಗ್ಯದಿಂದ ಇರಲು ಸಾಧ್ಯ ಎಂದು ಹೇಳಿದರು.ಪ್ರೇಮಾ ಗುಳಗೌಡರ, ಸುಶೀಲಾ ಬಾಗಮಾರ, ಮಂಗಲಾ ಅಬ್ಬಿಗೇರಿ, ನಾಗರತ್ನಾ ಪಾಟೀಲ, ಸರೋಜಿನಿ ಹಕ್ಕಾಪಕ್ಕಿ, ಆಶಾ ಹುಕ್ಕೇರಿ ಪ್ರೇಮಾ ಹಂದಿಗೋಳ, ಶಾಂತಾ ಗೌಡರ, ಅನ್ನಪೂರ್ಣ ವರವಿ, ವಿದ್ಯಾ ಶಿವನಗುತ್ತಿ, ಸುವರ್ಣ ವಸ್ತ್ರದ, ಸೌಮ್ಯ ಕಾಮತ್, ಸೋನಿಯಾ ರೇವಣಕರ, ಧನಲಕ್ಷ್ಮಿ ತುಂಬೇಟಿ, ಸುಲೋಚನಾ ಐಹೊಳಿ, ಶಕುಂತಲಾ ಸಿಂಧೂರ ಮತ್ತಿತರರು ಹಾಜರಿದ್ದರು.ಮೀನಾಕ್ಷಿ  ಸಜ್ಜನರ ಅತಿಥಿಗಳನ್ನು ಪರಿಚಯಿಸಿದರು. ಪ್ರೇಮಾ ಮೇಟಿ ಪ್ರಾರ್ಥಿಸಿದರು. ಯಶೋಧರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶಾಂತಾ ನಿಂಬಣ್ಣವರ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.