ಗುರುವಾರ , ಮೇ 13, 2021
31 °C

ತಾಯಿಯನ್ನು ಕಿಚ್ಚಿಟ್ಟು ಕೊಂದು ಮಗ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಟ್ಲ (ದಕ್ಷಿಣ ಕನ್ನಡ): ಖಿನ್ನತೆಗೊಳಗಾದ ವ್ಯಕ್ತಿಯೊಬ್ಬ ತಾಯಿಯನ್ನೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದು, ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಕುಳ ಎಂಬಲ್ಲಿ  ಶುಕ್ರವಾರ ರಾತ್ರಿ ನಡೆದಿದೆ.ಹಾಸನ ಜಿಲ್ಲೆ ಸಕಲೇಶಪುರದ ಮೂಲದ ಕೃಷ್ಣ (35) ಮತ್ತು  ತಾಯಿ ಭವಾನಿಯಮ್ಮ (60) ಘಟನೆಯಲ್ಲಿ ಸತ್ತವರು. ಇಬ್ಬರೂ ಬಂಟ್ವಾಳ ತಾಲ್ಲೂಕು ಕುಳ ಗ್ರಾಮದ ಕಲ್ಲಂದಡ್ಕದ ಬಾಡಿಗೆ ಮನೆಯಲ್ಲಿ ನಾಲ್ಕು ತಿಂಗಳಿಂದ ನೆಲೆಸಿದ್ದರು.ಭವಾನಿಯಮ್ಮ ಅಂಗವೈಕಲ್ಯದಿಂದ ಬಳಲುತ್ತಿದ್ದರು. ಸುಧಾ ಎಂಬುವವಳನ್ನು  ವಿವಾಹವಾಗಿದ್ದ ಕೃಷ್ಣನಿಗೆ ವೈಶಾಲಿ (7) ಹಾಗೂ ಸುಖೇಶ್ (4) ಎಂಬ ಮಕ್ಕಳಿದ್ದಾರೆ. ಪತ್ನಿ ಜತೆ ವಿರಸದ ಕಾರಣ ಈತ ತಾಯಿ ಜತೆಗೆ ವಾಸಿಸುತ್ತಿದ್ದ.ಶುಕ್ರವಾರ ರಾತ್ರಿ ಈತ ವಿಪರೀತ ಮದ್ಯ ಸೇವಿಸಿ ಬಂದಿದ್ದ ಎನ್ನಲಾಗಿದ್ದೆ. ಕೋಣೆಯೊಳಗೆ ಬೀಗ ಹಾಕಿಕೊಂಡು, ಈ ಕೃತ್ಯ ಮಾಡಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.