ಸೋಮವಾರ, ಜೂನ್ 14, 2021
24 °C

ತಾಯಿ ಪ್ರಿಯಕರನಿಂದ ಮಗಳು ಗರ್ಭಿಣಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹದಿನಾಲ್ಕು ವರ್ಷದ ಬಾಲಕಿ­­ಯೊಬ್ಬಳು ತನ್ನ ತಾಯಿಯ ಪ್ರಿಯಕರನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಗರ್ಭವತಿ­ಯಾಗಿ­ರುವ ಘಟನೆ ವೈಯಾಲಿ­ಕಾವಲ್‌ ಸಮೀಪದ ಮಾರುತಿ ಲೇಔಟ್‌ನಲ್ಲಿ ನಡೆದಿದೆ.ಈ ಕೃತ್ಯದ ನಂತರ ಬಾಲಕಿಯ ತಾಯಿ ಹಾಗೂ ಆರೋಪಿ ಶಂಕರ್‌ ಪರಾರಿ­ಯಾಗಿ­ದ್ದಾರೆ. ಅವರು ತಮಿಳು­ನಾಡಿ­ನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಶೀಘ್ರವೇ ಅವರನ್ನು ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.ತಮಿಳುನಾಡು ಮೂಲದ ಮಹಿಳೆ, 15 ವರ್ಷಗಳ ಹಿಂದೆ ಕೂಲಿ ಕಾರ್ಮಿಕ­ನನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡು ವರ್ಷ­ಗಳ ಹಿಂದೆ ದಂಪತಿ ಪರಸ್ಪರ ದೂರಾ­ಗಿ­ದ್ದರು. ಹೀಗಾಗಿ ಮಹಿಳೆ ಪುತ್ರಿ-­ಯೊಂದಿಗೆ ಮಾರುತಿ ಲೇಔಟ್‌ನಲ್ಲಿ ನೆಲೆ­ಸಿದ್ದರು. ಈ ನಡುವೆ ಮಹಿಳೆಗೆ ವೈಯಾಲಿ­ಕಾವಲ್‌­ನಲ್ಲಿ ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದ ಶಂಕರ್‌ನ ಪರಿಚಯ­ವಾಯಿತು ಎಂದು ಪೊಲೀಸರು ಹೇಳಿದ್ದಾರೆ.ಕಾಲಕ್ರಮೇಣ ಅವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ನಂತರ ಆತ ಮಹಿಳೆ ಮನೆಗೆ ಬಂದು ಹೋಗಲಾ­ರಂಭಿಸಿದ್ದ. ಇದ­ರಿಂದಾಗಿ ಬಾಲಕಿ ಕೂಡ ಆತನಿಗೆ ಪರಿಚಯ­ವಾಗಿದ್ದಳು. ಮಹಿಳೆ ಕೂಲಿ ಕೆಲಸಕ್ಕೆ ತೆರಳಿದ್ದ ಸಂದರ್ಭ­ದಲ್ಲಿ ಮನೆಗೆ ಹೋಗಿದ್ದ ಆರೋಪಿ, ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೇ, ಈ ಸಂಗತಿ ಬಹಿ­ರಂಗ­­ಪಡಿಸಿದರೆ ಕೊಲೆ ಮಾಡುವು­ದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.ಬಾಲಕಿ ದೇಹ­ದಲ್ಲಾದ ಬದ­ಲಾ­ವಣೆ­ಗಳಿಂದ ಅನು­ಮಾನ­ಗೊಂಡ ಸಂಬಂಧಿ­ಕರು, ಆಕೆ­ಯನ್ನು ಆಸ್ಪತ್ರೆಗೆ ಕರೆದು­ಕೊಂಡು ಹೋಗಿ ತಪಾಸಣೆ ಮಾಡಿ­ಸಿದ್ದಾರೆ. ಆಗ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿ­ರುವ ಸಂಗತಿ ಗೊತ್ತಾ­ಗಿದೆ ಎಂದು ಪೊಲೀಸರು ಹೇಳಿದ್ದಾರೆ.ಬಾಲಕಿ ನಗರದ ಖಾಸಗಿ ಶಾಲೆ­ಯಲ್ಲಿ ಎಂಟನೇ ತರಗತಿ ಓದುತ್ತಿ­ದ್ದಾಳೆ. ಆಕೆ  ತಂದೆ, ಪುತ್ರನೊಂದಿಗೆ ವೈಯಾಲಿ­ಕಾವಲ್‌ನಲ್ಲೇ ವಾಸವಾಗಿ­ದ್ದಾರೆ. ಘಟನೆ ಸಂಬಂಧ ಅತ್ಯಾಚಾರ (ಐಪಿಸಿ 376), ಬೆದರಿಕೆ (ಐಪಿಸಿ 506) ಹಾಗೂ ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳ­ಲಾಗಿದೆ’ ಎಂದು ವೈಯಾಲಿಕಾವಲ್‌ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.