ಶುಕ್ರವಾರ, ಮಾರ್ಚ್ 5, 2021
18 °C

ತಾಯಿ ಭಾರತಿಗೆ ಕನ್ನಡದಾರತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಯಿ ಭಾರತಿಗೆ ಕನ್ನಡದಾರತಿ

ಸಪ್ತಕ ಸಂಗೀತ ಅಕಾಡೆಮಿ ಹಾಗೂ ಪರಂಪರಾ ಕಲ್ಚರಲ್ ಫೌಂಡೇಷನ್ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಎಪ್ಪತ್ತನೇ ಸ್ವತಂತ್ರೋತ್ಸವದ ಅಂಗವಾಗಿ ನಗರದ ನಯನ ಸಭಾಂಗಣದಲ್ಲಿ ‘ತಾಯಿ ಭಾರತಿಗೆ ಕನ್ನಡದಾರತಿ’ ಶೀರ್ಷಿಕೆ ಅಡಿಯಲ್ಲಿ ನಾಡು-ನುಡಿ ದೇಶಭಕ್ತಿಗೀತೆಗಳ ಗಾಯನ ಏರ್ಪಡಿಸಿತ್ತು.ಕಾರ್ಯಕ್ರಮದ ಮೊದಲಿಗೆ ಹೊಂಬಾಳೆ ಪ್ರತಿಭಾರಂಗದ ವಿದ್ಯಾರ್ಥಿಗಳು ‘ಲೋಕಾಲೋಕೆ ಓಂ ತತ್ ಸದಿತಿ, ಲೋಕಾಂತರ್ಗತ ಮಾತಾ ಅದಿತಿ’ (ದ.ರಾ. ಬೇಂದ್ರೆ) ಹಾಗೂ ‘ಭಾರತದ ಜನ ಭಾರತೀಯ ಮನ ಎಲ್ಲಿದ್ದರೂ ಒಂದಂತೆ’ (ಆನಂದಕಂದ) ಹಾಡಿದರು.ಸೃಜನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ‘ನಿನ್ನದೇ ನೆಲ, ನಿನ್ನದೇ ಜಲ, ನಿನ್ನದೇ ಆಕಾಶ’  (ಜಿ.ಎಸ್. ಶಿವರುದ್ರಪ್ಪ) ಮತ್ತು ‘ಉರಿವ ಬಿಸಿಲಿರಲಿ, ಕೊರೆವ ಚಳಿಯಿರಲಿ, ಮನದೊಳಿರಲಿ ನಿನ್ನ ಧ್ಯಾನ’ (ಪು.ತಿ.ನ), ಪಂಚಾಮೃತ ಸುಗಮ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳಿಂದ ‘ನಮೋ ದೇವಿ, ನಮೋ ತಾಯಿ, ನಮೋ ಭರತ ಮಾತೆ’ (ಕುವೆಂಪು) ಹಾಗೂ ‘ಐಕ್ಯವೊಂದೇ ಮಂತ್ರ,

ಐಕ್ಯವೇ ಸ್ವಾತಂತ್ರ್ಯ’ (ಕಯ್ಯಾರ ಕಿಞಣ್ಣರೈ), ರಂಗ ಸಂಸ್ಥಾನ ವಿದ್ಯಾರ್ಥಿಗಳಿಂದ ‘ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ’, (ಕೆ.ಎಸ್.ನಿಸಾರ್‌ ಅಹಮದ್) ಮತ್ತು ‘ಐದು ಬೆರಳು ಕೂಡಿ ಒಂದು ಮುಷ್ಟಿಯು’ (ಎಚ್.ಎಸ್. ವೆಂಕಟೇಶ ಮೂರ್ತಿ) ಸ್ವರಸ್ಮಿತಾ ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳಿಂದ  ‘ಒಂದೇ ಒಂದೇ ನಾವೆಲ್ಲರೂ ಒಂದೇ’ (ಜಿ.ಎಸ್. ಶಿವರುದ್ರಪ್ಪ) ಹಾಗೂ ‘ಆಕಾಶಕ್ಕೆದ್ದುನಿಂತ ಪರ್ವತ ಹಿಮ ಮೌನದಲ್ಲಿ’ (ಕೆ.ಎಸ್. ನರಸಿಂಹಸ್ವಾಮಿ) ದೇಶಭಕ್ತಿಗೀತೆಗಳು ಕಲಾಸಕ್ತರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.ವಸಂತ್‌ಕುಮಾರ್ ಕುಂಬ್ಳೆ (ಕೀ ಬೋರ್ಡ್), ಎಸ್.ಮಧುಸುದನ್ (ತಬಲಾ), ವಿ. ಯಶೋಧರ (ರಿದಂ ಪ್ಯಾಡ್), ಎಲ್.ಎನ್.ವಸಂತ್‌ಕುಮಾರ್ (ಕೊಳಲು) ಸಹಕರಿಸಿದರು.ಸಪ್ತಕ ಸಂಗೀತ ಅಕಾಡೆಮಿ ಅಧ್ಯಕ್ಷ ಸಿ.ಎಂ ಗಂಗಾಧರಯ್ಯ, ಪರಂಪರಾ ಕಲ್ಚರಲ್ ಫೌಂಡೇಷನ್ ಸಂಸ್ಥೆಯ ಕಾರ್ಯದರ್ಶಿ ಎ.ಪಂಕಜ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಹೊಂಬಾಳೆಯ ಎಚ್.ಫಲ್ಗುಣ, ಸೃಜನ ಸಂಗೀತ ಶಾಲೆಯ ನರಹರಿ ದೀಕ್ಷಿತ್, ಪಂಚಾಮೃತ ಸುಗಮ ಸಂಗೀತ ಅಕಾಡೆಮಿಯ ಗಾಯತ್ರಿ ಕೇಶವ್, ರಂಗ ಸಂಸ್ಥಾನದ ಬಂಡ್ಲಹಳ್ಳಿ ವಿಜಯ ಕುಮಾರ್, ಸ್ವರಸ್ಮಿತಾ ಸಂಗೀತ ಸಂಸ್ಥೆಯ ಸ್ಮಿತಾ ವಸಂತ್ ಸೇರಿದಂತೆ ಹಲವಾರು ಕಲಾಸಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.