ಬಿಳಿಯ ಮಿನಿಸ್ಕರ್ಟ್ನ ಮೇಲರ್ಧ ಕಪ್ಪು ಟಾಪ್ನಂಥ ಡ್ರೆಸ್. ಭುಜದವರೆಗಿನ ನೇರ ಕೂದಲು ಹಾರಿಸುತ್ತ.. ಕನಿಷ್ಠ ಐದಿಂಚಿನ ಚೂಪಾದ ಹಿಮ್ಮಡಿಯ ಕಪ್ಪು ಶೂ ಧರಿಸಿ ನಟಿ ಲಾರಾ ದತ್ ಹಳೆ ವಿಮಾನ ನಿಲ್ದಾಣ ರಸ್ತೆಯ ತಾರಾ ಹೋಟೆಲೊಂದರಲ್ಲಿ ಗ್ಲಾಮರ್ ಬೊಂಬೆಯಂತೆ ನಡೆದು ಬಂದರು.

ಅದಕ್ಕೊಂದು ಕಾರಣವೂ ಇತ್ತು. ಏಷ್ಯದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ಸ್ ‘ಪ್ರುಕ್ಸಾ ಸಿಲ್ವಾನಾ’ ಬೆಂಗಳೂರಿನಲ್ಲಿ ತನ್ನ ಕಾರ್ಯ ಆರಂಭಿಸಲಿದೆ. ಅದರ ಘೋಷಣಾ ಸಮಾರಂಭಕ್ಕೆ ಲಾರಾ ತಾರಾ ಮೆರುಗು ತುಂಬಿದರು.
‘ಆಫ್ಕೋರ್ಸ್ ಐ ಕ್ಯಾನ್ ಅಂಡರ್ಸ್ಟ್ಯಾಂಡ್ ಕನ್ನಡಾ’ (ಕನ್ನಡ ಅರ್ಥವಾಗುತ್ತೆ). ಸೇಂಟ್ ಫ್ರಾನ್ಸಿಸ್ ಜೇವಿಯರ್ ಗರ್ಲ್ಸ್ ಹೈಸ್ಕೂಲ್ನಲ್ಲಿ ಓದಿದ್ದೇನೆ ಎಂದು ಭುಜ ಕುಣಿಸಿ ಉಲಿದರು. ಆದರೆ ಆಡಿದ ಮಾತೆಲ್ಲ ಇಂಗ್ಲಿಷ್. ಆಂಗ್ಲೊ ಇಂಡಿಯನ್ ತಾಯಿ, ಪಂಜಾಬಿ ತಂದೆ (ಎಲ್.ಕೆ. ದತ್ತಾ, ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್) ಇರುವುದೀಗ ಬೆಂಗಳೂರಿನಲ್ಲೇ. ಹಾಗಾಗೇ ಮರಳಿ ಮನೆಗೆ ಬಂದ ಪುಳಕದ ಗಳಿಗೆ.

ತುಂಬ ಬದಲಾಗಿದೆ ಬೆಂಗಳೂರು. ಇಲ್ಲಿನ ಟ್ರಾಫಿಕ್, ಮಾಲಿನ್ಯ, ಕಟ್ಟಡಗಳು, ಏರ್ಪೋರ್ಟ್... ಆದರೂ ತನ್ನತನ ಉಳಿಸಿಕೊಂಡಿದೆ ಎಂದರು.

1981ರಿಂದ ಬೆಂಗಳೂರಿನಲ್ಲಿ ನೆಲೆಸಿದ ಕುಟುಂಬ. ಸಹಜವಾಗೇ ಲಾರಾಗೆ ಈಗಲೂ ಇಲ್ಲಿನ ಕೂಲ್ ವಾತಾವರಣ... ಇವೆಲ್ಲ ಈ ಊರಿಗಿಂತ ಹೆಚ್ಚಾಗಿ ಇಲ್ಲಿನ ಜನರನ್ನು ಮಿಸ್ ಮಾಡಿಕೊಳ್ಳುವಂತೆ ಮಾಡಿದೆಯಂತೆ. ಬರ್ಲಿನ್ನಲ್ಲಿ ‘ಡಾನ್2’ (ಡಾನ್ ಚಿತ್ರದ ಮುಂದುವರಿದ ಭಾಗ) ಚಿತ್ರದ ಶೂಟಿಂಗ್ನಲ್ಲಿದ್ದೆ; ನಾಳೆ ಮತ್ತೆ ಅಲ್ಲಿಗೇ ಹಾರಲಿದ್ದೇನೆ ಎಂದು ವೈಯಾರದಿಂದ ಹೇಳಿದರು.

ಆಕ್ಷನ್ ಚಿತ್ರಗಳೂ ಇಷ್ಟವೆನ್ನುವ ಲಾರಾಗೆ ಇಂಥದೇ ಫಿಲ್ಮ್ ನೋಡಬೇಕೆಂಬ ಇರಾದೆಯೇನಿಲ್ಲ. ‘ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ, ಕನ್ನಡ ಚಿತ್ರಗಳನ್ನು ನೋಡಿಯೇ ಇಲ್ಲ’ ಎಂದು ಬೋಲ್ಡ್ ಆಗಿ ಹೇಳಿದರು. ಕನ್ನಡ ಚಿತ್ರದಲ್ಲಿ ನಟಿಸುವ ಯೋಚನೆ ಇದೆಯಾ ಎಂದರೆ ಇಲ್ಲಿಯವರೆಗೆ ಯಾರೂ ನಟಿಸಲು ಕೇಳಿಯೇ ಇಲ್ವಲ್ಲಾ ಎಂದು ಜಾರಿಕೊಂಡರು.

ಸ್ವಂತ ನಿರ್ಮಾಣದ ವ್ಯಂಗ್ಯಭರಿತ ಹಾಸ್ಯಚಿತ್ರ. ‘ಚಲೊ ದಿಲ್ಲಿ’ಯ ಮೂಲಕ ನಿರ್ಮಾಪಕಿಯಾದ ಲಾರಾ ಅದರಲ್ಲಿ ನಟಿ ಕೂಡ.

ಮದುವೆಯ ಬಗ್ಗೆ ಯೋಚನೆ... ಎಂದರೆ ಮದುವೆಯಾಗುವುದು ಒಳ್ಳೆಯದು. ಸದ್ಯದಲ್ಲೇ ಬೆಂಗಳೂರಿನವರನ್ನೇ ಮದುವೆಯಾಗುತ್ತಿದ್ದೇನೆ (ಟೆನಿಸ್ ಆಟಗಾರ ಮಹೇಶ್ ಭೂಪತಿಯೊಡನೆ ನಿಶ್ಚಿತಾರ್ಥವಾಗಿದೆ) ಸಮಯ ಸಿಗಬೇಕಷ್ಟೇ ಎಂದು ಅವಸರದಲ್ಲಿ ಹೊರಟೇಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.