ಶನಿವಾರ, ಮೇ 15, 2021
25 °C
ಸವಾಯಿ ಗಂಧರ್ವ ಸಭಾಂಗಣದಲ್ಲಿ ಸಿದ್ಧತೆ

ತಾಲ್ಲೂಕು ಸಾಹಿತ್ಯ ಸಮ್ಮೇಳನ 16ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಜೂನ್ 16ರಂದು ಆಯೋಜಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಈ ಸಮ್ಮೇಳನಕ್ಕಾಗಿ ಕೇಂದ್ರ ಕಸಾಪ ಘಟಕ ್ಙ 1ಲಕ್ಷ ಅನುದಾನ ನೀಡಿದೆ ಎಂದರು.ಯಾವುದೇ ಆಡಂಬರ ಇಲ್ಲದೇ ವೈಚಾರಿಕತೆ, ಸಂವಾದ, ಚರ್ಚೆಗಳಿಗೆ ಹೆಚ್ಚಿನ ಅವಕಾಶ ನೀಡಿ ಈ ಸಮ್ಮೇಳನವನ್ನು ರೂಪಿಸಲಾಗಿದೆ. ರಾಜಕಾರಣಿಗಳನ್ನು ಸಾಹಿತ್ಯ ವೇದಿಕೆಗೆ ಕರೆಯುವುದಾಗಲಿ,  ಸಾಂಪ್ರದಾಯಿಕವಾಗಿ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನಾಗಲಿ ಈ ಬಾರಿ ನಡೆಸುತ್ತಿಲ್ಲ  ಎಂದು ಅವರು ತಿಳಿಸಿದರು.ಸಮ್ಮೇಳನಾಧ್ಯಕ್ಷರಾಗಿ ಎಂ.ಡಿ.ಗೋಗೇರಿ ಅವರನ್ನು ಆಯ್ಕೆ ಮಾಡಲಾಗಿದ್ದು, ಅಂದು ಬೆಳಿಗ್ಗೆ 9.30ಕ್ಕೆ ಸಾಹಿತಿ ವೀಣಾ ಬನ್ನಂಜೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಲೇಖಕ ಡಾ.ಪ್ರಹ್ಲಾದ ಅಗಸನಕಟ್ಟೆ ಆಶಯ ನುಡಿ ಆಡಲಿದ್ದು ನಿಕಟಪೂರ್ವ ಅಧ್ಯಕ್ಷ ಪ್ರೊ.ಶ್ರೀನಿವಾಸ ತೋಫಖಾನೆ ಅವರನ್ನು ಎಸ್.ಕೆ.ದೇಸಾಯಿ ಸ್ಮರಿಸಲಿದ್ದಾರೆ ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪದ ಮಾತುಗಳನ್ನಾಡಲಿದ್ದಾರೆ.ದಿನವಿಡೀ ನಡೆಯುವ ಈ ಸಮ್ಮೇಳನದಲ್ಲಿ ಒಟ್ಟಾರೆ ಮೂರು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಸಾಧಕರಿಗೆ ಗೌರವ, ಪುಸ್ತಕ ಅನಾವರಣ, ಸ್ಮರಣ ಸಂಚಿಕೆ ಬಿಡುಗಡೆ, ಸಂಜೆ ಪ್ರಹಸನ, ನೃತ್ಯ, ಹಾಸ್ಯ, ಕೋಲಾಟ ಮತ್ತು ರಸಮಂಜರಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.ಗೋಷ್ಠಿಗಳ ವಿವರ

ಮೊದಲ ಗೋಷ್ಠಿ- ಹುಬ್ಬಳ್ಳಿ ಮಜಲುಗಳು: ಬೆಳಿಗ್ಗೆ 11.15ರಿಂದ ಮಧ್ಯಾಹ್ನ 12.45ರವರೆಗೆ. `ಹುಬ್ಬಳ್ಳಿ ಸಾಹಿತ್ಯ ವಲಯ'-ನಿರಂಜನ ವಾಲಿಶೆಟ್ಟರ, `ಆ ಕಾಲದ ಹುಬ್ಬಳ್ಳಿ'-ನಾರಾಯಣ ಘಳಗಿ, `ಹುಬ್ಬಳ್ಳಿ ರಾಜಕೀಯ ದಿಕ್ಕು ದೆಸೆ'-ಡಾ.ಪಾಂಡುರಂಗ ಪಾಟೀಲ, `ವಾಣಿಜ್ಯ ಕೇಂದ್ರವಾಗಿ ಹುಬ್ಬಳ್ಳಿ'-ಮದನ ದೇಸಾಯಿ,  `ಹುಬ್ಬಳ್ಳಿಯ ನಾಟಕ ಕ್ಷೇತ್ರ'-ಡಾ.ಗೋವಿಂದ ಮಣ್ಣೂರು, `ಹುಬ್ಬಳ್ಳಿಯಲ್ಲಿ ಕ್ರೀಡೆ: ಹಿಂದೆ, ಇಂದು, ಮುಂದು, ಸುತ್ತ'- `ಪ್ರಜಾವಾಣಿ' ನಿವೃತ್ತ ಸಹ ಸಂಪಾದಕ ಗೋಪಾಲಕೃಷ್ಣ ಹೆಗಡೆ. ನಿರ್ವಹಣೆ-ಸುಭಾಶ ನರೇಂದ್ರ.ಎರಡನೇ ಗೋಷ್ಠಿ- ಕವಿ ಕಾವ್ಯ ಲಹರಿ: ಮಧ್ಯಾಹ್ನ 2 ರಿಂದ 3ರವರೆಗೆ.ಜಗದೀಶ ಮಂಗಳೂರಮಠ, ಕೆ.ಜಿ.ಭಟ್, ಹೇಮಾ ಪಟ್ಟಣಶೆಟ್ಟಿ, ರಾಮು ಮೂಲಗಿ, ಸಿ.ಎಂ.ಮುನಿಸ್ವಾಮಿ, ಡಾ.ಗೋವಿಂದ ಹೆಗಡೆ, ಸುಶಿಲೇಂದ್ರ ಕುಂದರಗಿ, ಎ.ಸಿ.ವಾಲಿ, ರಮಜಾನ್ ಕಿಲ್ಲೇದಾರ, ಶ್ವೇತಾ ಕರ್ಕಿ, ಎಸ್.ಆರ್. ಆಶಿ, ಎಸ್.ವಿ.ಪಟ್ಟಣಶೆಟ್ಟಿ, ರತ್ನಾ ಅಂಗಡಿ, ವಿರೂಪಾಕ್ಷ ಕಟ್ಟಿಮನಿ, ನಿರ್ವಹಣೆ: ಕವಿಮಾತು-ಕಿವಿಮಾತು-ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ.ಮೂರನೇ ಗೋಷ್ಠಿ: ನನ್ನ ಬರವಣಿಗೆ: ಮಧ್ಯಾಹ್ನ  3.15ರಿಂದ 4.15ರವರೆಗೆ.ನನ್ನ ಕತೆಗಳು-ಸುನಂದಾ ಕಡಮೆ, ನನ್ನ ಕಾದಂಬರಿ-ಡಾ.ರಮೇಶ ಬಾಬು, ನನ್ನ ಪ್ರಬಂಧಗಳು-ಆರೂರು ಲಕ್ಷ್ಮಣ ಶೇಟ್, ನನ್ನ ಕವಿತೆಗಳು-ಮಹಾಂತಪ್ಪ ನಂದೂರ.ವಿವಿಧ ಸಾಧಕರಿಗೆ ಸನ್ಮಾನ: ಶಿವಲಿಂಗಮ್ಮ ಕಟ್ಟಿ (ಸಾಹಿತ್ಯ), ಈರಣ್ಣ ಕಾಡಪ್ಪನವರ (ಕ್ರೀಡೆ), ಎಂ.ಎಂ.ಕನಕೇರಿ (ಪತ್ರಿಕೆ), ವಸಂತ ಕುಲಕರ್ಣಿ (ರಂಗಭೂಮಿ), ಸಾಧು ಕಠಾರೆ (ನಾಟಕ), ಎನ್.ಬಿ.ರಾಮಾಪುರ (ಸಾಹಿತ್ಯ ಸಂಘಟನೆ).ಪುಸ್ತಕ ಅನಾವರಣ: ಸ್ಮರಣ ಸಂಚಿಕೆ-ಕುಂ ವೀರಭದ್ರಪ್ಪ, ಎಂ.ಡಿ.ಗೋಗೇರಿ ಸಮಗ್ರ ಸಾಹಿತ್ಯ-ವೀಣಾ ಬನ್ನಂಜೆ, ಲೋಕಾಂತ ವೀಣಾ ಬನ್ನಂಜೆ-ಡಾ.ಕೊಟ್ಟೂರ ಸ್ವಾಮೀಜಿ, ಕಲ್ಮಠ, ಇತರ ಪುಸ್ತಕಗಳು-ರುದ್ರಾಕ್ಷಿಮಠದ ಬಸವಲಿಂಗಸ್ವಾಮೀಜಿ ಅನಾವರಣ ಮಾಡುವರು.ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೆ.ಎಸ್. ಕೌಜಲಗಿ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಎ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.