ಶನಿವಾರ, ಜನವರಿ 25, 2020
28 °C

ತಾಳಿಕೋಟಿ: ಧರ್ಮ ಜಾಗೃತಿ ಮೂಡಿಸಿದ ಪ್ರವಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಇಲ್ಲಿಯ ಶರಣ ಮುತ್ಯಾನ ದೇವಸ್ಥಾನದ ಮೈದಾನ ದಲ್ಲಿ ಇತ್ತೀಚೆಗೆ ಮುಗಿದ ಕುರಾನ್ ಪ್ರವಚನ ಕಾರ್ಯಕ್ರಮ ಭಕ್ತಿಭಾವ ಮೂಡಿಸಿತು. ಎಲ್ಲಿ ನೋಡಿದರೂ ಜನ ಸಾಗರವೇ ಇತ್ತು. ಎಷ್ಟು ಬೇಗ ಪ್ರವಚನ ಮುಗಿದುಹೋಯಿತಲ್ಲ ಎಂದು ಜನರು ಹಳಹಳಿಸು ವಂತಾಯಿತು.ಸ್ಥಳೀಯ ಜಮಾತೆ ಇಸ್ಲಾಮೀ ಹಿಂದ್ ವತಿಯಿಂದ ಮೂರು ದಿನಗಳವರೆಗೆ ಏರ್ಪಡಿಸಲಾಗಿದ್ದ ಈ ಪ್ರವಚನಕ್ಕೆ ಜಾತಿಭೇದ ಮರೆತು ಪ್ರತಿದಿನ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಆಗಮಿಸುತ್ತಿದ್ದರು. ಕನ್ನಡದಲ್ಲಿಯೇ ಪ್ರವಚನ ನಡೆಯು ತ್ತಿದ್ದುದರಿಂದ ಜನ ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುತ್ತಿತ್ತು. ಹೀಗಾಗಿ ವಿವಿಧ ಧರ್ಮಗಳಿಗೆ ಸೇರಿದ ಜನರು ಪ್ರವಚನ ಕೇಳಲು ಬರುತ್ತಿ ದ್ದರು.ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನದ ನಂತರ ಇಷ್ಟೊಂದು ಜನ ಸಾಗರ ಸೇರಿರಲಿಲ್ಲ. ಈ ನಶ್ವರ ಜಗತ್ತಿನಲ್ಲಿ `ಮಾನವೀಯತೆಯೇ ಅಂತಿಮ~ ಎಂಬ ಸತ್ಯದರ್ಶನ ಈ ಪ್ರವಚನದಲ್ಲಿ ಆಯಿತು. ಶರಣ ಮುತ್ಯಾ ದೇವಸ್ಥಾನದ ಮೈದಾನವು ಕೋಮು ಸೌಹಾರ್ದತೆಗೆ ಸಾಕ್ಷಿ ಯಾಗಿತ್ತು.ಹಿಂದೂ-ಮುಸ್ಲಿಂ ಭಾಯಿ, ಭಾಯಿ~ ಎಂದ ಗಾಂಧೀಜಿ, `ಮಾನ ವೀಯತೆಯೇ ದೊಡ್ಡದು~ ಎಂದ ಡಾ.ಅಂಬೇಡ್ಕರ್, `ಇವನಾರವ, ಇವನಾರವನೆನ್ನದೆ ಇವ ನಮ್ಮವನೆನ್ನಿರಿ~ ಎಂದ ಬಸವಣ್ಣ, `ಆಗು ನಿ ಅನಿಕೇತನ~ ಎಂದ ಕುವೆಂಪು ಮುಂತಾದ ಮಹನೀಯರ ಮಾತುಗಳಲ್ಲಿ ಪ್ರವಚನಲ್ಲಿ ಅನುರಣಿಸಿದವು.ಪ್ರೀತಿ, ದಯೆ, ಕರುಣೆ,  ಸಮಾನತೆ, ಮಾನವತೆ, ಸಹಬಾಳ್ವೆಗಳೇ ಮಾನವ ಕುಲವನ್ನು ಉಳಿಸುವಂಥವು ಹಾಗೂ  ಅಂತಿಮವಾಗಿ ಉಳಿಯುವುದು ಮಾನವ ಪ್ರೀತಿಯೆಂಬ ಸತ್ಯ. ಉಳಿದೆಲ್ಲವೂ ಮಿಥ್ಯ ಮತ್ತು ಕ್ಷಣಿಕ. ಎಲ್ಲ ಜನಾಂಗಗಳ ಮನುಷ್ಯರು ಇದನ್ನೇ ಸಾಧಿಸಲು, ಉಳಿಸಲು ಪ್ರಯತ್ನಿಸಿದರು ಎಂಬುದೇ ಪ್ರವಚನದ ಸಂದೇಶವಾಗಿತ್ತು.

ತತ್ವ ಮತ್ತು ಆದರ್ಶಗಳನ್ನು ಮರೆತು ಮಾನವ ಪಂಗಡ ಕಟ್ಟಿ, ಸ್ವಾರ್ಥ ಮತ್ತು ದುರಾಸೆಯಿಂದ ವರ್ತಿಸುತ್ತಿರುವುದರಿಂದ ಮಾನವ ಕುಲ ನಾಶವಾಗುತ್ತಿದೆ. ಎಲ್ಲ ತಪ್ಪುಗಳನ್ನು ಮನಸ್ಸೆಂಬ ದೇವರೆದುರು ಒಪ್ಪಿಕೊಳ್ಳುತ್ತೇವೆ. ಶಿಕ್ಷೆ ಅನುಭವಿಸುತ್ತೇವೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞ ಅಭಿಪ್ರಾಯಪಟ್ಟರು.ವಿವಿಧ ಧರ್ಮಗುರುಗಳು ಈ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕುರಾನ್‌ನಲ್ಲಿರುವ ಸಂದೇಶಗಳನ್ನು ಅವರು ವಿವರಿಸಿ ಹೇಳಿದರು. ಕುರಾನ್ ಕೇವಲ ಮುಸ್ಲಿಮರಿಗಷ್ಟೇ ಮಾತ್ರ ಸೀಮಿತವಲ್ಲ, ಇಡೀ ಮಾನವ ಜನಾಂಗಕ್ಕೆ ಸಂಬಂಧಿಸಿದ್ದು ಎಂದು ತಿಳಿಹೇಳಿದರು.

 

ಪ್ರತಿಕ್ರಿಯಿಸಿ (+)