ಭಾನುವಾರ, ಆಗಸ್ಟ್ 9, 2020
21 °C
ಕ್ರಿಕೆಟ್: ಮಿಂಚಿದ ನಾರಾಯಣ್, ಡರೆನ್ ಬ್ರಾವೊ

ತಿರುಗೇಟು ನೀಡಿದ ವಿಂಡೀಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುಗೇಟು ನೀಡಿದ ವಿಂಡೀಸ್

ಗಯಾನ (ಎಎಫ್‌ಪಿ): ಮೊದಲ ಪಂದ್ಯದಲ್ಲಿ ಅನುಭವಿಸಿದ್ದ ಹೀನಾಯ ಸೋಲಿನಿಂದ ಚೇತರಿಸಿಕೊಂಡಿರುವ ವೆಸ್ಟ್ ಇಂಡೀಸ್ ತಂಡ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ 37 ರನ್‌ಗಳ ಗೆಲುವು ಪಡೆದು ಪಾಕಿಸ್ತಾನಕ್ಕೆ ತಿರುಗೇಟು ನೀಡಿತು.ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 232 ರನ್ ಕಲೆ ಹಾಕಿತು. ಈ ಗುರಿಯನ್ನು ಮುಟ್ಟುವ ಹಾದಿಯಲ್ಲಿ ಎಡವಿದ ಮಿಸ್ಬಾ ಉಲ್ ಹಕ್ ನೇತೃತ್ವದ ಪಾಕ್ 47.5 ಓವರ್‌ಗಳಲ್ಲಿ 195 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಗೆಲುವಿನ ಮೂಲಕ ಆತಿಥೇಯರು ಐದು ಪಂದ್ಯಗಳ ಸರಣಿಯಲ್ಲಿ 1-1ರಲ್ಲಿ ಸಮಬಲ ಸಾಧಿಸಿದರು.ಬ್ರಾವೊ ಬಲ: ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪರದಾಡಿದ ವಿಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಡರೆನ್ ಬ್ರಾವೊ (54, 81ಎಸೆತ, 6 ಬೌಂಡರಿ) ಮತ್ತು ಡ್ವೇನ್ ಬ್ರಾವೊ (ಔಟಾಗದೆ 43, 52ಎಸೆತ, 5ಬೌಂಡರಿ) ಆಸರೆಯಾದರು. ಇದರಿಂದ ಕೆರಿಬಿಯನ್ ನಾಡಿನ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು.ಗುರಿಯನ್ನು ಮುಟ್ಟುವ ಹಾದಿಯಲ್ಲಿ ಪಾಕ್ ತಂಡ ನಾಸೀರ್ ಜಮ್‌ಷೆದ್ (54, 93ಎಸೆತ, 4ಬೌಂಡರಿ, 1 ಸಿಕ್ಸರ್) ಅವರ ಅರ್ಧಶತಕದ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಆದರೆ, ಮಧ್ಯಮ ಕ್ರಮಾಂಕದ ವೈಫಲ್ಯ ತಂಡದ ಸೋಲಿಗೆ ಕಾರಣವಾಯಿತು. ಉಮರ್ ಅಕ್ಮಲ್ (50, 46ಎಸೆತ, 5 ಬೌಂಡರಿ, 1 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸಲು ನಡೆಸಿದ ಹೋರಾಟ ಫಲ ನೀಡಲಿಲ್ಲ.ಸಂಕ್ಷಿಪ್ತ ಸ್ಕೋರು:

ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 232. (ಕ್ರಿಸ್ ಚಾರ್ಲ್ಸ್ 31, ಡರೆನ್ ಬ್ರಾವೊ 54, ಮರ್ಲಾನ್ ಸ್ಯಾಮುಯೆಲ್ಸ್ 21, ಡ್ವೇನ್     ಬ್ರಾವೊ ಔಟಾಗದೆ 43, ಕೀರನ್ ಪೊಲಾರ್ಡ್ 30; ಮಹಮ್ಮದ್ ಇರ್ಫಾನ್ 38ಕ್ಕೆ1, ಸಯೀದ್ ಅಜ್ಮಲ್ 45ಕ್ಕೆ2, ಶಾಹಿದ್ ಅಫ್ರಿದಿ 23ಕ್ಕೆ2).

ಪಾಕಿಸ್ತಾನ 47.5 ಓವರ್‌ಗಳಲ್ಲಿ 195. (ನಾಸೀರ್ ಜಮ್‌ಷೆದ್ 54, ಮಹಮ್ಮದ್ ಹಫೀಜ್ 20, ಮಿಸ್ಬಾಉಲ್ ಹಕ್ 17, ಉಮರ್ ಅಕ್ಮಲ್ 50; ಕೆಮರ್ ರೋಚ್ 14ಕ್ಕೆ1, ಸುನಿಲ್ ನಾರಾಯಣ್ 26ಕ್ಕೆ4, ಡ್ವೇನ್ ಬ್ರಾವೊ 9ಕ್ಕೆ2). ಫಲಿತಾಂಶ: ಪಾಕಿಸ್ತಾನಕ್ಕೆ 37 ರನ್ ಗೆಲುವು. ಪಂದ್ಯ ಶ್ರೇಷ್ಠ: ಸುನಿಲ್ ನಾರಾಯಣ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.