ಮಂಗಳವಾರ, ಮೇ 18, 2021
22 °C
ಮಾಡಿ ನಲಿ ಸರಣಿ-18

ತಿಳಿಯಬಲ್ಲಿರಾ ಮರದ ಎತ್ತರ?

ಪ್ರೋ.ಸಿ.ಡಿ.ಪಾಟೀಲ್ Updated:

ಅಕ್ಷರ ಗಾತ್ರ : | |

ಸಾಮಗ್ರಿ: ಮೀಟರ್ ಸ್ಕೇಲ್, ಕೋಲು ವಿಧಾನ


1. ಹಗಲು 8-10 ಗಂಟೆ ಅಥವಾ ಸಂಜೆ 3-5 ಗಂಟೆ ವೇಳೆಗೆ ಈ ಚಟುವಟಿಕೆ ಮಾಡಬೇಕು.

2. ಒಂದು ಮೀಟರ್ ಉದ್ದ ಇರುವ ನೇರವಾದ ಕೋಲನ್ನು ತೆಗೆದುಕೊಳ್ಳಿ.

3. ನೀವು ಅಳೆಯಬೇಕೆಂದಿರುವ ಮರದ ಕಾಂಡದ ನೇರಕ್ಕೆ ಆ ಕೋಲನ್ನು ಬಿಸಿಲಿನಲ್ಲಿ ನೆಟ್ಟಗೆ ನಿಲ್ಲಿಸಿ.

4. ಕೋಲಿನ ನೆರಳನ್ನು ನಿಮ್ಮಲ್ಲಿರುವ ಸ್ಕೇಲ್‌ನಿಂದ ಅಳೆದು ನಮೂದಿಸಿ.

5. ಅನಂತರ ಸ್ಕೇಲ್ ಮೂಲಕ ಮರದ ಕಾಂಡದಿಂದ ಅದರ ಒಟ್ಟು ನೆರಳನ್ನು ಅಳತೆ ಮಾಡಿ.

ಪ್ರಶ್ನೆ: ಮರ ಹತ್ತದೆ ಮರದ ಎತ್ತರವನ್ನು ಕಂಡು ಹಿಡಿಯಲು ಸಾಧ್ಯವೇ? ಹೇಗೆ?

ಉತ್ತರ

`ಅ.ಬ.' ಒಂದು ಮೀಟರ್ ಉದ್ದವಿರುವ ಕೋಲು. `ಬ.ಕ.' ಕೋಲಿನ ನೆರಳು. ಅದನ್ನು ಸ್ಕೇಲಿನಿಂದ ಅಳೆದಾಗ 1.5 ಮೀಟರ್ ನೆರಳಿದೆ. ಈಗ ಕಾಂಡ ಹೊರಟ ಸ್ಥಳದಿಂದ ಮರದ ಒಟ್ಟು ನೆರಳನ್ನು ಸ್ಕೇಲಿನಿಂದ ಅಳೆಯುತ್ತಾ ಹೋದಾಗ ಅದರ ಉದ್ದ (ಬಿ.ಸಿ.) 25 ಮೀಟರ್. ಅಂದರೆ ಮರದ ಎತ್ತರ (ಎ.ಬಿ.) 16.6 ಮೀಟರ್.ಅ.ಬ. = 1 ಮೀಟರ್  ಬಿ.ಸಿ. = 25 ಮೀಟರ್

ಬ.ಕ. = 1.5 ಮೀಟರ್  ಎ.ಬಿ. = 16.6 ಮೀಟರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.