ಭಾನುವಾರ, ಮೇ 22, 2022
24 °C

ತುಂಗಾ ನದಿಯಲ್ಲಿ ಇಬ್ಬರು ಯುವಕರು ನೀರು ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಶಿವಮೊಗ್ಗ: ಹರಕೆರೆ ಸಮೀಪದ ತುಂಗಾ ನದಿಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಶವಗಳು ಬುಧವಾರ ಬೆಳಿಗ್ಗೆ ಪತ್ತೆಯಾಗಿವೆ. ನಗರದ ಪಿಂಗಾರ ಬಾರ್‌ನಲ್ಲಿ ಕಾರ್ಯ ರ್ನಿಹಿಸುತ್ತಿದ್ದ ನವೀನ್ (23) ಮತ್ತು ಹೊಸ ಹುಡ್ಕೋ ಕಾಲೊನಿಯ ಆರಿಫ್ (18) ಮೃತಪಟ್ಟವರು. ಈ ಇಬ್ಬರು ಮತ್ತು ಸಂಜಯ್ ಎಂಬುವರು ಸೇರಿ ಮಂಗಳವಾರ ಈಜಲು ತುಂಗಾ ನದಿಗೆ ತೆರಳಿದ್ದರು.ನವೀನ್ ಮತ್ತು ಆರಿಫ್ ನದಿಯಲ್ಲಿ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆದರೆ, ಸಂಜಯ್ ನದಿಗೆ ಇಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.