ಸೋಮವಾರ, ಮೇ 16, 2022
29 °C

ತುಂಬಿದ ಕೃಷ್ಣೆ; ಹೆಚ್ಚಿದ ಪ್ರವಾಸಿಗರ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡಲಸಂಗಮ: ಇಲ್ಲಿನ ಕೃಷ್ಣಾ ನದಿಗೆ ಕಳೆದ ಎರಡು ದಿನಗಳಿಂದ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಸುಂದರ ವಾತಾವರಣ ಸೃಷ್ಟಿಯಾಗಿದೆ.ಇದೇ ಸಂದರ್ಭದಲ್ಲಿ ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿರುವ ಕಟಗೂರ, ತುರಡಗಿ, ಕೆಂಗಲ್ಲ, ಕಜಗಲ್ಲ, ಅಡವಿಹಾಳ, ಕಮದತ್ತ, ಇದ್ದಲಗಿ, ಗಂಜಿಹಾಳ ಮುಂತಾದ ಗ್ರಾಮಗಳ ಜನರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.ನದಿಯಲ್ಲಿ ಭಾರಿ ನೀರು ಹರಿಯುತ್ತಿರುವ ಕಾರಣ ನದಿ ದಡದ ರೈತರು ಪಂಪ್‌ಸೆಟ್‌ಗಳನ್ನು ತೆಗೆಯುವ ದೃಶ್ಯ ಸೋಮವಾರ ಕಂಡು ಬಂತು.ಶಾಂತವಾಗಿದ್ದ ಕೃಷ್ಣೆಯಲ್ಲಿ ಕಳೆದ ಎರಡು ದಿನ ಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಸದ್ಯ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಸ್ಪರ್ಶಿಸಲು ಇನ್ನೂ ಎಂಟು ಮೇಟ್ಟಿಲುಗಳು ಬಾಕಿ ಇವೆ.ದಸರಾ ರಜೆ, ಖೇಣಿ ಹುಟ್ಟುಹಬ್ಬ ಇತ್ಯಾದಿ ಗಳಿಂದಾಗಿ ಕಳೆದ ಮೂರು ದಿನಗಳಿಂದ ಅಧಿಕ ಪ್ರಮಾ ಣದ ಪ್ರವಾಸಿಗರು ಕೂಡಲಸಂಗಮಕ್ಕೆ ಬರುತ್ತಿ ರುವರು. ರಜೆಯ ಅಂಗವಾಗಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಕೂಡಲಸಂಗಮಕ್ಕೆ ಬಂದು ಕಷ್ಣಾ ಹಾಗೂ ಮಲ್ಲಪ್ರಭಾ ನದಿಯಲ್ಲಿ ಸ್ನಾನ ಮಾಡಿ ದೋಣಿ ವಿಹಾರ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.