ತುಮಕೂರು ಬಳಿ ರಸ್ತೆ ಅಪಘಾತ: 15 ಸಾವು

7

ತುಮಕೂರು ಬಳಿ ರಸ್ತೆ ಅಪಘಾತ: 15 ಸಾವು

Published:
Updated:
ತುಮಕೂರು ಬಳಿ ರಸ್ತೆ ಅಪಘಾತ: 15 ಸಾವು

ತುಮಕೂರು (ಐಎಎನ್ಎಸ್): ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಹೆಗ್ಗರೆ ಗ್ರಾಮದ ಸಮೀಪ ಟೆಂಪೊ ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15 ಪ್ರಯಾಣಿಕರು ಮೃತಪಟ್ಟಿದ್ದಾರೆ.

~ಸೋಮವಾರ ಮಧ್ಯಾಹ್ನ 1ಗಂಟೆ ವೇಳೆಗೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಟೆಂಪೊ, ವಾಹನ ಒಂದನ್ನು ಹಿಂದಿಕ್ಕುವ ಪ್ರಯತ್ನದಲ್ಲಿದ್ದಾಗ ಎದುರಿನಿಂದ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ~ ಎಂದು ತುಮಕೂರು ಜಿಲ್ಲಾಧಿಕಾರಿ ಸಿ.ಸೋಮಶೇಖರ್ ತಿಳಿಸಿದ್ದಾರೆ.

~ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನತದೃಷ್ಟ ಟೆಂಪೊ ಗುಬ್ಬಿ ಬಳಿಯ ಹಳ್ಳಿಯೊಂದಕ್ಕೆ ಸೇರಿದೆ. ಟೆಂಪೊದಲ್ಲಿದ್ದವರಲ್ಲಿ 15 ಮಂದಿ ಮೃತಪಟ್ಟಿದ್ದು, ಐವರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ~ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಮೃತರ ಕುಟುಂಬದವರಿಗೆ ಸರ್ಕಾರ 50 ಸಾವಿರ ರೂಪಾಯಿ ಪರಿಹಾರ ಧನ ನೀಡಲಿದೆ. ಜತೆಗೆ ಗಾಯಗೊಂಡವರಿಗೆ ಚಿಕಿತ್ಸೆಗಾಗಿ 15 ಸಾವಿರ ರೂಪಾಯಿ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ ತಿಳಿಸಿದ್ದಾರೆ.

ಚಾಲಕ ಸೇರಿದಂತೆ ಹದಿಮೂರು ಜನ ಪ್ರಯಾಣಿಕರಿಗೆ ಅವಕಾಶವಿದ್ದ ಈ ನತದೃಷ್ಟ ಟೆಂಪೊದಲ್ಲಿ ಒಟ್ಟು 20 ಮಂದಿ ಪ್ರಯಾಣಿಸುತ್ತಿದ್ದರು.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry