ತುಮಕೂರು: ಜಿಲ್ಲೆಯಲ್ಲಿ 8.31 ಲಕ್ಷ ಜಾನುವಾರುಗಳಿವೆ. ಆದರೆ, ಬೇಸಿಗೆಯಲ್ಲಿ ಬರಗಾಲ ಎಂದು ಜಿಲ್ಲಾಡಳಿತವು ಕೇವಲ 5 ಗೋಶಾಲೆಗಳನ್ನು ತೆರೆದಿತ್ತು. ಜಿಲ್ಲೆಯ ಎಲ್ಲ 10 ತಾಲ್ಲೂಕುಗಳನ್ನೂ ಬರ ಪೀಡಿತ ಎಂದು ಘೋಷಿಸಿದ್ದರೂ 3 ತಾಲ್ಲೂಕುಗಳಲ್ಲಿ ಮಾತ್ರ ಗೋಶಾಲೆ ತೆರೆಯಲಾಗಿತ್ತು. ಆದರೆ, ಈ ಎಲ್ಲ ಗೋಶಾಲೆಗಳನ್ನು ಮುಂಗಾರು ಮಳೆ ಆರಂಭವಾಗುವ ಮುನ್ನವೇ ಮುಚ್ಚಲಾಗಿದೆ.

ಜಾನುವಾರುಗಳಿಗೆ ಮೇವಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಮತ್ತೆ ಇದೇ ಸ್ಥಳಗಳಲ್ಲಿ ಗೋಶಾಲೆ ತೆರೆಯಲು ಜಿಲ್ಲಾಡಳಿತ ಮುಂದಾಗಿದೆ. ತಾಲ್ಲೂಕು ಕಾರ್ಯಪಡೆ ಇನ್ನೂ ವರದಿ ನೀಡದ ಕಾರಣ ವಿಳಂಬ ಆಗುತ್ತಿದೆ.

ಮೇನಲ್ಲಿ ಅಲ್ಪ ಮಳೆಯಾಗಿದ್ದ ಸಂದರ್ಭ ಬಿತ್ತನೆ ಮಾಡಲಾಗಿತ್ತು. ನಂತರ ಮಳೆಯಾಗದೆ ಪೈರು ಬಿಸಿಲ ಬೇಗೆಗೆ ಮುರುಟಿ ಹೋಗಿದೆ. ಮುಂದೆ ಸಹ ಮೇವು ದೊರೆಯುವ ಸಾಧ್ಯತೆ ಇಲ್ಲ. ತುರುವೇಕೆರೆ, ಗುಬ್ಬಿ ತಾಲ್ಲೂಕು ಹೊರತು ಪಡಿಸಿದರೆ ಉಳಿದ ಎಲ್ಲ ಕಡೆ ಮೇವಿಗೆ ಹಾಹಾಕಾರವಿದೆ. ಆದರೂ ಗೋಶಾಲೆ ತೆರೆಯಲು ಅಥವಾ ಮೇವು ಬ್ಯಾಂಕ್ ಸ್ಥಾಪಿಸಲು ಸಾಧ್ಯವಾಗಿಲ್ಲ.

ಸರ್ಕಾರ ಬರ ಪರಿಸ್ಥಿತಿ ನಿರ್ವಹಣೆಗೆ ಕಳೆದ ಮಾರ್ಚ್ನಲ್ಲಿ ರೂ 15 ಕೋಟಿ ನೀಡಿದೆ. ಗೋಶಾಲೆ ತೆರೆಯಲು ಅಥವಾ ಕುಡಿಯುವ ನೀರು ಒದಗಿಸಲು ಯಾವುದೇ ಹಣದ ಮಿತಿ ಇಲ್ಲ. ಹೆಚ್ಚುವರಿ ಹಣದ ಅಗತ್ಯವಿದ್ದರೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಬಹುದು. ತಾಲ್ಲೂಕು ಕಾರ್ಯಪಡೆ ಬೇಡಿಕೆ ಸಲ್ಲಿಸಲಿಲ್ಲ ಎಂಬ ಕಾರಣಕ್ಕೆ ಹೆಚ್ಚು ಗೋಶಾಲೆ ತೆರೆಯಲು ಮುಂದಾಗಿಲ್ಲ.

ಶಿರಾ ತಾಲ್ಲೂಕಿನ ಗಂಡಿಹಳ್ಳಿ ಮಠ, ಭೂತಪ್ಪನಗುಡಿ, ಪಾವಗಡ ತಾಲ್ಲೂಕಿನ ನಾಗಲಮಡಿಕೆ ಮತ್ತು ಮಧುಗಿರಿ ತಾಲ್ಲೂಕಿನ ಗೂಗಲಗುಟ್ಟೆ, ಮಡಿಕೇನಹಳ್ಳಿಯಲ್ಲಿ ಗೋಶಾಲೆ ತೆರೆಯಲಾಗಿತ್ತು. ಪ್ರತಿ ಗೋಶಾಲೆಗೆ ಸರ್ಕಾರ ರೂ 10 ಲಕ್ಷ ನೀಡಿತ್ತು. ಗಂಡಿಹಳ್ಳಿ ಮಠದ ಗೋಶಾಲೆ 5 ತಿಂಗಳ ಕಾಲ ನಡೆಯಿತು. ಉಳಿದೆಲ್ಲ ಗೋಶಾಲೆಗಳು ಕಾರ್ಯ ನಿರ್ವಹಿಸಿದ್ದು ಕೇವಲ 1ರಿಂದ 2 ತಿಂಗಳು ಮಾತ್ರ. ನಂತರ ಮೇನಲ್ಲಿ ಸಣ್ಣದಾಗಿ ಬಿದ್ದ ಮಳೆಯ ಕಾರಣ ನೀಡಿ ಎಲ್ಲ ಗೋಶಾಲೆಗಳನ್ನು ಮುಚ್ಚಲಾಯಿತು.

ಗೋಶಾಲೆಯ ಸುತ್ತಲಿನ ಗರಿಷ್ಠ 5 ಕಿ.ಮೀ. ದೂರದಿಂದ ಜಾನುವಾರುಗಳನ್ನು ಕರೆ ತರಬಹುದು. ಅದಕ್ಕಿಂತ ದೂರದ ಪ್ರದೇಶದಿಂದ ಪ್ರತಿನಿತ್ಯ ಗೋವುಗಳನ್ನು ಹೊಡೆದುಕೊಂಡು ಬರಲು ಸಾಧ್ಯವಿಲ್ಲ. ಹೀಗಾಗಿ ಹೆಚ್ಚು ರೈತರಿಗೆ ಗೋಶಾಲೆಯಿಂದ ಪ್ರಯೋಜನವಾಗಿಲ್ಲ. ಜಿಲ್ಲೆಯ 8.31 ಲಕ್ಷ ಗೋವುಗಳಲ್ಲಿ ಪ್ರತಿ ಗೋಶಾಲೆಗೆ 500ರಂತೆ ಕೇವಲ 2500 ಗೋವುಗಳಿಗೆ ಮಾತ್ರ ಮೇವು ದೊರೆತಿದೆ. ಪ್ರತಿ ಹೋಬಳಿಗೆ ಒಂದರಂತೆ ಗೋಶಾಲೆ ತೆರೆಯಬೇಕು ಎನ್ನುವುದು ರೈತರ ಬೇಡಿಕೆ. ಆದರೆ ಅದಕ್ಕೆ ಬೇಕಾದ ಸಿಬ್ಬಂದಿ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಲ್ಲೂಕು ಕಾರ್ಯಪಡೆಯಲ್ಲಿ ಆಯಾ ಕ್ಷೇತ್ರದ ಶಾಸಕರು, ತಹಸೀಲ್ದಾರ್, ಕೃಷಿ ಇಲಾಖೆ ಮತ್ತು ಪಶು ಪಾಲನೆ ಇಲಾಖೆ ಸಹಾಯಕ ನಿರ್ದೇಶಕರು ಇರುತ್ತಾರೆ. ಇದುವರೆಗೂ ಯಾವುದೇ ತಾಲ್ಲೂಕು ಕಾರ್ಯಪಡೆ ಮತ್ತೆ ಗೋಶಾಲೆ ತೆರೆಯುವ ಬಗ್ಗೆ ಜಿಲ್ಲಾಧಿಕಾರಿಗೆ ಇದುವರೆಗೆ ವರದಿ ಸಲ್ಲಿಸಿಲ್ಲ.

15 ದಿನದಲ್ಲಿ ಮತ್ತೆ ಗೋಶಾಲೆ: ಜಿಲ್ಲೆಯಲ್ಲಿ ಗೋವುಗಳಿಗೆ ಮೇವು ಇಲ್ಲದಂತಾಗಿರುವುದು ನಿಜ. ಈಗಾಗಲೇ ಗೋಶಾಲೆ ತೆರೆಯುವ ಬಗ್ಗೆ ತಹಸೀಲ್ದಾರ್ ಮಟ್ಟದ ಸಭೆ ನಡೆಸಲಾಗಿದೆ. ಮಳೆ ಬಾರದಿದ್ದರೆ 15 ದಿನದಲ್ಲಿ ಗೋಶಾಲೆ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್. ಕೆ.ರಾಜು ತಿಳಿಸಿದ್ದಾರೆ.

ಬರ ಪರಿಸ್ಥಿತಿ ನಿಭಾಯಿಸಲು ಸರ್ಕಾರಕ್ಕೆ ರೂ 8.31 ಲಕ್ಷ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲು ಗೋಶಾಲೆ ತೆರೆಯಲಾಗಿದ್ದ ಶೆಲ್ಟರ್ಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶದ ಕಣೇಕಲ್ಲು ಪ್ರದೇಶದಿಂದ ಮೇವು ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಗೋಶಾಲೆ ಮತ್ತು ಮೇವು ಬ್ಯಾಂಕ್ ತೆರೆಯಲಾಗುವುದು. ಅಲ್ಲದೆ ರೈತರು ಹೊರಗಿನಿಂದ ಮೇವು ತರಿಸಲು ಮುಂದಾದರೆ ಪ್ರತಿ ಕಿ.ಮೀ.ಗೆ ಟನ್ಗೆ ರೂ 12.50 ನೀಡಲಾಗುವುದು. ಉಚಿತವಾಗಿ ಮೇವು ವಿತರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು.

ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ ಹೆಚ್ಚು ಗೋಶಾಲೆ ತೆರೆಯಲು ಸಿಬ್ಬಂದಿ ಕೊರತೆ ಇದೆ. ಬೇಡಿಕೆ ಬಂದ ಕಡೆ ಸಾಕಷ್ಟು ತೆರೆಯಲಾಗುವುದು. ಅಲ್ಲದೆ ಹಸುಗಳಿಗೆ ಹಸಿರು ಮೇವು ಬೇಕಾಗಿರುವುದರಿಂದ ಮೇವಿನ ಬೀಜ ನೀಡಲಾಗಿದೆ. ಹೀಗಾಗಿ ಹಾಲಿನ ಪ್ರಮಾಣದಲ್ಲಿ ಸಹ ಹೆಚ್ಚಳವಾಗಿದೆ ಎಂದು ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ರವೀಂದ್ರ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.