ಮಂಗಳವಾರ, ಮೇ 11, 2021
25 °C

ತೆಂಗಿನಮರಕ್ಕೆ ಸುಳಿ ಬಾಧೆ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ. ಕೋಟೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಒಂದೆಡೆ ರೈತರು ಕೃಷಿ ಚಟುವಟಿಕೆಯಲ್ಲಿ ಸಂತಸದಿಂದ ತೊಡಗಿದ್ದಾರೆ. ಆದರೆ ಇನ್ನೊಂದೆಡೆ ತೆಂಗಿನ ಮರಗಳ ಸುಳಿ ಒಣಗಿ ಹೋಗುತ್ತಿರುವುದು ತೆಂಗು ಬೆಳೆಗಾರರ ನಿದ್ದೆಗೆಡಿಸಿದೆ.ತಾಲ್ಲೂಕಿನ ರಾಜೇಗೌಡನಹುಂಡಿ ಗ್ರಾಮದ ರೈತ ಸೋಮಣ್ಣಾಚಾರಿ ಅವರ 2 ಎಕರೆ ಜಮೀನಿನಲ್ಲಿ ತೆಂಗಿನ ಮರಗಳನ್ನು ಬೆಳೆಸಲಾಗಿದೆ. ಆದರೆ ಆ ಮರಗಳು  ಕಳೆದ 2 ವರ್ಷಗಳಿಂದ ನೀರಿಲ್ಲದೇ ಒಣಗಿ ನಿಂತಿದ್ದು ತೆಂಗಿನಮರದ ಮೇಲ್ಭಾಗ ಕಳಚಿ ಬೀಳುತ್ತಿದೆ. ಅಲ್ಲದೇ ಅಕ್ಕಪಕ್ಕದ ತೋಟಗಳಿಗೂ ಈ ರೋಗ ಹರಡುತ್ತಿದ್ದು, ತೆಂಗು ಬೆಳೆಗಾರರು ತೀವ್ರ ಆತಂಕದ ಪರಿಸ್ಥಿತಿ ಎದುರಿಸುತ್ತಿದ್ದು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ಮರಗಳ ಸುಳಿ ಒಣಗಿ ಕಳಚಿ ಬೀಳುತ್ತಿವೆ. ಇದು ಯಾವ ರೀತಿಯ ರೋಗ ಎನ್ನುವುದು ತೋಚದೆ ರೈತರು ಕಂಗಾಲಾಗಿದ್ದಾರೆ.ಎಚ್.ಡಿ.ಕೋಟೆ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿದ್ದರಾಜು ಪ್ರಜಾವಾಣಿಯೊಂದಿಗೆ ಮಾತನಾಡಿ ಇಂತಹ ರೋಗಗಳು ಕೆಲ ಭಾಗದಲ್ಲಿ ಪತ್ತೆಯಾಗಿದ್ದು, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸ್ಥಳಪರಿಶೀಲನೆ ನಡೆಸಿ ನಂತರ ಹೆಚ್ಚಿನ ಮಾಹಿತಿಯನ್ನು ತಿಳಿಸಿಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.