ಶುಕ್ರವಾರ, ಜನವರಿ 17, 2020
22 °C

ತೆರೆಮರೆಯಲ್ಲಿ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇರಕೊಟ್ಲಾ (ಪಂಜಾಬ್) (ಪಿಟಿಐ): ಮುಸ್ಲಿಂ ಮತದಾರರ ಬಾಹುಳ್ಯ ಇರುವ ಈ ಕ್ಷೇತ್ರದಲ್ಲಿ ಇಬ್ಬರು ಮಹಿಳಾ ಮಣಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈ ಇಬ್ಬರ ಗಂಡಂದಿರಲ್ಲಿ ಒಬ್ಬರು ಹಾಲಿ ಐಪಿಎಸ್ ಅಧಿಕಾರಿಯಾಗಿದ್ದರೆ ಮತ್ತೊಬ್ಬರು ನಿವೃತ್ತ ಐಪಿಎಸ್ ಅಧಿಕಾರಿ.ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ರಜಿಯಾ ಸುಲ್ತಾನಾ ಮತ್ತು ಶಿರೋಮಣಿ ಅಕಾಲಿ ದಳದ ಫರ್‌ಜಾನಾ ಆಲಂ  ಪ್ರತಿಸ್ಪರ್ಧಿಗಳಾಗಿದ್ದಾರೆ. ಆದರೆ, ನಿಜವಾದ ಹೋರಾಟ ಇರುವುದು ರಜಿಯಾ ಪತಿ,     ಪಂಜಾಬ್ ಎಡಿಜಿಪಿ ಮಹಮ್ಮದ್ ಮುಸ್ತಾಫ ಮತ್ತು  ಫರ್‌ಜಾನಾ ಪತಿ, ನಿವೃತ್ತ ಡಿಜಿಪಿ ಇಜಾರ್ ಆಲಂ ಅವರ ನಡುವೆ. ಚುನಾವಣಾ ರ‌್ಯಾಲಿಗಳಲ್ಲಿ ಇವರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ.ಮೂರನೇ ಸಲ ಗೆಲ್ಲುವ ಮೂಲಕ `ಹ್ಯಾಟ್ರಿಕ್~ ಸಾಧಿಸಲು ಹೊರಟಿರುವ ರಜಿಯಾ ಅವರ ಪರವಾಗಿ ಪತಿ ಎಲ್ಲಿಲ್ಲದ ಪ್ರಚಾರ ಕೈಗೊಂಡಿದ್ದಾರೆ. ಇದಕ್ಕಾಗಿ ಅವರು ವೈದ್ಯಕೀಯ ರಜೆ ತೆಗೆದುಕೊಂಡಿದ್ದರು. ಆದರೆ, ವಿರೋಧ ಪಕ್ಷ ಶಿರೋಮಣಿ ಅಕಾಲಿ ದಳ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರಿಂದ ಅವರ ರಜೆ ರದ್ದುಪಡಿಸಿ, ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

 

ಪ್ರತಿಕ್ರಿಯಿಸಿ (+)