ಭಾನುವಾರ, ಮೇ 9, 2021
26 °C

ತೆರೆಯದ ಮೊರಾರ್ಜಿ ವಸತಿ ಶಾಲೆ; ವಿದ್ಯಾರ್ಥಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಪ್ರಸ್ತಕ ಶೈಕ್ಷಣಿಕ ವರ್ಷ ಆರಂಭವಾಗಿ ವಾರ ಕಳೆದಿದ್ದರೂ ಉಮ್ಮತ್ತೂರು ಮತ್ತು ಜನ್ನೂರು ಮಾರ್ಗ ಮಧ್ಯೆದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಇನ್ನು ತೆರೆದಿಲ್ಲ. ಶೈಕ್ಷಣಿಕ ವರ್ಷ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಪಾಠಪ್ರವಚನಗಳಿಂದ ವಂಚಿಸಲಾಗಿದೆ.ಇಲ್ಲಿ 6ರಿಂದ 10ನೇ ತರಗತಿವರೆಗೆ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ತಾಲ್ಲೂಕಿಗೆ ಸೇರಿದ ಗ್ರಾಮಗಳ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆ ಆರಂಭದ ದಿನ ಮಕ್ಕಳು ಬೇಸಿಗೆ ರಜೆ ಮುಗಿಸಿಕೊಂಡು ವಸತಿ ಶಾಲೆಗೆ ಆಗಮಿಸಿದ್ದರೂ ಪಾಠಪ್ರವಚನ ಆರಂಭಿಸಿಲ್ಲ. ಊಟ, ತಿಂಡಿ ವ್ಯವಸ್ಥೆ ಇಲ್ಲದ ಪರಿಣಾಮ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಮರಳಿದ್ದಾರೆ. ವಸತಿನಿಲಯದಲ್ಲಿ ಯಾರೂ ಇಲ್ಲದಿರುವುದರಿಂದ ಗೇಟ್ ಮತ್ತು ಬಾಗಿಲಿಗೆ ಬೀಗ ಜಡಿಯಲಾಗಿದೆ.ಮೇಲ್ವಿಚಾರಕರನ್ನು ಖಾಯಂ ಆಗಿ ನೇಮಿಸದ ಕಾರಣ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಸತಿ ಶಾಲೆ ಆರಂಭದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಂತಾಗಿದೆ. ಇದರಿಂದ ಆಗಾಗ್ಗೆ ವಿದ್ಯಾರ್ಥಿಗಳು ವಸತಿ ಶಾಲೆಗೆ ಎಡತಾಕುವಂತಾಗಿದೆ.

ಶೀಘ್ರ ವಸತಿಶಾಲೆ ಆರಂಭಿಸಬೇಕು ಎಂಬುದು ಪೋಷಕರು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.