ಶನಿವಾರ, ಮೇ 8, 2021
23 °C

ತೆರೆಸಾಗೆ ಸೇರಿದ ಕಟ್ಟಡ ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಐಎಎನ್‌ಎಸ್/ಆರ್‌ಐಎ ನೊವೊತ್ಸಿ): ಮದರ್ ತೆರೆಸಾ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲು ಮಾಸ್ಕೊ ನಗರಾಡಳಿತ ಸಿದ್ಧಗೊಂಡಿರುವಂತೆಯೇ, ಅವರಿಗೆ ಸೇರಿದ ಕಟ್ಟಡವನ್ನು ಅದು ನೆಲಸಮಗೊಳಿಸಿದೆ.   ಕಟ್ಟಡವು  ಸೂಕ್ತ ಅನುಮತಿ ಹೊಂದಿಲ್ಲದಿದ್ದುದೇ ಇದಕ್ಕೆ ಕಾರಣ ಎಂದು ನಗರಾಡಳಿತ ಹೇಳಿದೆ.

ಮಾಸ್ಕೊದ ಪೂರ್ವಕ್ಕಿರುವ ತೆರೆಸಾ ಅವರು ಸ್ಥಾಪಿಸಿದ್ದ ಮಿಶನರೀಸ್ ಆಫ್ ಚಾರಿಟಿಗೆ ಸೇರಿದ್ದ ಎರಡು ಕಟ್ಟಡಗಳು ಅಂಗವಿಕಲರಿಗೆ ಮತ್ತು ನಿರ್ಗತಿಕರಿಗೆ ಆಶ್ರಯ ನೀಡಿತ್ತು.

 

ಆ ಎರಡು ಕಟ್ಟಡಗಳಲ್ಲಿ ಒಂದು ಕಟ್ಟಡವನ್ನು ನೆಲಸಮ ಗೊಳಿಸಲು ಮತ್ತು ಇನ್ನೊಂದು ಕಟ್ಟಡದ ಮೇಲಿನ ಮಹಡಿಯನ್ನು ಕೆಡವಲು ಅನುಮತಿ ನೀಡುವಂತೆ ಸ್ಥಳೀಯ ಆಡಳಿತ ಮೂರು ವರ್ಷಗಳ ಹಿಂದೆ ಕೋರ್ಟ್ ಮೊರೆ ಹೋಗಿತ್ತು.ಒಂದು ಕಟ್ಟಡವನ್ನು ಶುಕ್ರವಾರ ನೆಲಸಮಗೊಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.