ಮಂಗಳವಾರ, ಮೇ 18, 2021
22 °C

ತೆರೆಸಾ ನಿವಾಸಕ್ಕೆ ಅರ್ಜೆಂಟೀನಾ ಆಟಗಾರರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ):  ವೆನಿಜುವೆಲಾ ಎದುರು ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯ ಆಡಲು ಇಲ್ಲಿಗೆ ಆಗಮಿಸಿದ್ದ ಅರ್ಜೆಂಟೀನಾ ತಂಡದವರು ಶನಿವಾರ ಮದರ್ ತೆರೆಸಾ ನಿವಾಸಕ್ಕೆ ತೆರಳಿ ನಮನ ಸಲ್ಲಿಸಿದರು. ಆದರೆ ಭದ್ರತಾ ಕಾರಣದಿಂದ `ಫುಟ್‌ಬಾಲ್ ಮಾಂತ್ರಿಕ~ ಲಿಯೊನೆಲ್ ಮೆಸ್ಸಿ ಹೋಗಿರಲಿಲ್ಲ.ನಿಕೊಲಾಸ್ ಬರ್ಡಿಸೊ, ಜೊನಾಸ್ ಗಟಿರೆಜ್, ಮರಿಯಾನೊ ಅಂಡುಜರ್, ಮಾರ್ಕಸ್ ರೊಜೊ, ಫೆಡರಿಕೊ ಫರ್ನಾಂಡೀಸ್ ಹಾಗೂ ಎಸ್ಟಾಬನ್ ಅಂಡ್ರಾಡ ಅವರು ತೆರೆಸಾ ಪ್ರತಿಷ್ಠಾನಕ್ಕೆ ತೆರಳಿದ್ದರು. ಅಲ್ಲಿ ಈ ಆಟಗಾರರು ಅರ್ಧ ಗಂಟೆ ಕಳೆದರು. ಮೂರು ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ಡಿಯಾಗೊ ಮರಡೋನಾ ಕೂಡ ತೆರೆಸಾ ನಿವಾಸಕ್ಕೆ ಭೇಟಿ ನೀಡಿದ್ದರು.ಆದರೆ ವೆುಸ್ಸಿ ಸಂಜೆ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸಿದರು. ಸೋಮವಾರ ಈ ತಂಡದವರು ಢಾಕಾಕ್ಕೆ ತೆರಳಲಿದ್ದಾರೆ. ಅಲ್ಲಿ ನೈಜಿರಿಯಾ ಎದುರು ಸೌಹಾರ್ದ ಪಂದ್ಯ ಆಡಲಿದ್ದಾರೆ. ಯುವ ಭಾರತಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 1-0 ಗೋಲಿನಿಂದ ವೆನಿಜುವೆಲಾ ಎದುರು ಗೆಲುವು ಸಾಧಿಸಿತ್ತು.ಕೋಲ್ಕತ್ತದಲ್ಲಿ ತಾವು ಉಳಿದುಕೊಂಡಿರುವ ಹೋಟೆಲ್ ಹಾಗೂ ಕ್ರೀಡಾಂಗಣದ ಸೌಲಭ್ಯ ಅತ್ಯುತ್ತಮವಾಗಿರುವುದರಿಂದ ಆಟಗಾರರು ಸೋಮವಾರದವರೆಗೆ ಇಲ್ಲಿಯೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.ಬೆಕಂಗಿಂತ ಮೆಸ್ಸಿ ಶ್ರೇಷ್ಠ: ಇಂಗ್ಲೆಂಡ್ ತಂಡದ ಡೇವಿಡ್ ಬೆಕಂಗಿಂತ ಮೆಸ್ಸಿ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಎಂದು ಅರ್ಜೆಂಟೀನಾ ತಂಡದ ಕೋಚ್ ಅಲೆಜ್ಯಾಂಡ್ರೊ ಸಬೆಲ್ಲಾ ನುಡಿದಿದ್ದಾರೆ.`ಬೆಕಂ ಕೂಡ ಅತ್ಯುತ್ತಮ ಆಟಗಾರ. ಅವರ ಫ್ರೀ ಕಿಕ್ ಹಾಗೂ ಶೂಟಿಂಗ್ ಕೌಶಲ ಅಮೋಘ. ಈ ಕೌಶಲ್ಯ ಮೆಸ್ಸಿ ಬಳಿ ಇದೆಯಾ ಎಂಬುದು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಉಳಿದ ವಿಭಾಗ ದಲ್ಲಿ ಮೆಸ್ಸಿ ಶ್ರೇಷ್ಠ~ ಎಂದರು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.