ಪಣಜಿ (ಪಿಟಿಐ): ಕಿರಿಯ ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ತೆಹೆಲ್ಕಾ ಮಾಜಿ ಸಂಪಾದಕ ತರುಣ್ ತೇಜಪಾಲ್ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗೋವಾ ಪೀಠ ಶುಕ್ರವಾರ ವಜಾಗೊಳಿಸಿದೆ.
ತೇಜಪಾಲ್ ಫೆಬ್ರುವರಿ 17ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು.

ಮಾರ್ಚ್ 7ರಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಇದೇ 12ಕ್ಕೆ ವಿಚಾರಣೆ ಮುಂದೂಡಿತ್ತು. ಬುಧವಾರ (ಮಾ.12) ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಶುಕ್ರವಾರಕ್ಕೆ ಆದೇಶ ಕಾಯ್ದಿರಿಸಿತ್ತು.

ತಾಯಿ ಭೇಟಿಗೆ ಅನುಮತಿ: ಮಾಪುಸಾದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಾರಣಾಂತಿಕ ಮೆದುಳು ಗಡ್ಡೆ ಕಾಯಿಲೆಯಿಂದ ಕೊನೆಯ ಕ್ಷಣಗಳನ್ನು ಎಣೆಸುತ್ತಿರುವ ತಾಯಿ ಶಕುಂತಲಾ ಅವರನ್ನು ಭೇಟಿಯಾಗಲು ನ್ಯಾಯಾಲಯ ತೇಜ್ಪಾಲ್್ ಅವರಿಗೆ ಅನುಮತಿ ನೀಡಿದೆ. ತರುಣ್ ತೇಜಪಾಲ್ ಅವರನ್ನು ಪೊಲೀಸರು ಶನಿವಾರ ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ಯಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಜಾಮೀನು ಅರ್ಜಿ ತಿರಸ್ಕರಿಸಲು ಕಾರಣ ಏನು?: ‘ಆರೋಪಿ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಗಳಿರುವ ಕಾರಣ ಜಾಮೀನು ನಿರಾಕರಿಸಲಾಗಿದೆ‘ ಎಂದು ನ್ಯಾಯಮೂರ್ತಿ ಉತ್ಕರ್ಷ್ ಬಾಕ್ರೆ ತಿಳಿಸಿದ್ದಾರೆ. ‘ಕಾರಾಗೃಹದಲ್ಲಿ ಮೊಬೈಲ್ ಫೋನ್ ನಿಷೇಧವಿದ್ದರೂ ತೇಜಪಾಲ್, ಕಾನೂನು ಉಲ್ಲಂಘಿಸಿ ಗುಡಗಾಂವ್ ಮತ್ತು ನವದೆಹಲಿಯ ಕೆಲವರನ್ನು ಮೊಬೈಲ್ನಲ್ಲಿ ಸಂಪರ್ಕಿಸಿದ್ದಾರೆ.

ಒಂದು ವೇಳೆ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರು ನ್ಯಾಯಾಲಯದ ಷರತ್ತುಗಳ್ನು ಉಲ್ಲಂಘಿಸುವುದಿಲ್ಲ ಎನ್ನಲು ಯಾವುದೇ ಖಾತ್ರಿ ಇಲ್ಲ’ ಎಂದು ಬಾಕ್ರೆ ಹೇಳಿದರು.

’ಸುಪ್ರೀಂ’ಗೆ ಮೊರೆ
ಬಾಂಬೆ ಹೈಕೋರ್ಟ್ನ ಗೋವಾ ಪೀಠ ಜಾಮೀನು ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ತೇಜಪಾಲ್, ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಗಳ ಬಗ್ಗೆ ತಮ್ಮ ವಕೀಲರೊಂದಿಗೆ ಚರ್ಚಿಸುತ್ತಿದ್ದಾರೆ. ‘ಹೈಕೋರ್ಟ್ ಆದೇಶದ ಪ್ರತಿಯನ್ನು ಎದುರು ನೋಡುತ್ತಿದ್ದೇವೆ. ನಮ್ಮ ಮುಂದಿರುವ ಆಯ್ಕೆಗಳು ಮುಕ್ತವಾಗಿವೆ ’ ಎಂದು ಅವರ ವಕೀಲ ಸಂದೀಪ್ ಕಪೂರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.