ಕೈಷಿಕಿ ನಾಟ್ಯವಾಹಿನಿ: ಭಾನುವಾರ ತೇಜಸ್ವಿನಿ ರಂಗಪ್ರವೇಶ. ಅತಿಥಿಗಳು: ಗುರು ಸಿ. ರಾಧಾಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ, ಡಾ. ಚೂಡಾಮಣಿ ನಂದಗೋಪಾಲ್.

ಎಂಟನೇ ವರ್ಷದಲ್ಲಿಯೇ ಭರತನಾಟ್ಯ ಅಭ್ಯಾಸ ಆರಂಭಿಸಿದ ತೇಜಸ್ವಿನಿ ಹತ್ತು ವರ್ಷ ನೃತ್ಯಾಭ್ಯಾಸ ಮಾಡಿದ್ದಾರೆ. ಕೈಷಿಕಿ ನಾಟ್ಯವಾಹಿನಿಯ ಮಾಲಾ ಶಶಿಕಾಂತ್ ಮತ್ತು ಸಿ. ರಾಧಾಕೃಷ್ಣ ಅವರ ಶಿಷ್ಯೆ. ಕಿಕ್ಕೇರಿ ಕೃಷ್ಣಮೂರ್ತಿ ಅವರ ಬಳಿ ಆರು ವರ್ಷಗಳಿಂದ ಸುಗಮ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ವಿದ್ವಾನ್ ಪೂರ್ವ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾರೆ.

ಪ್ರಸ್ತುತ ಮುಂಬೈಯ ಗಂಧರ್ವ ಮಹಾ ವಿದ್ಯಾಲಯದಲ್ಲಿ ನೃತ್ಯದಲ್ಲಿ ಬಿಎ ಅಭ್ಯಾಸ ಮಾಡುತ್ತಿದ್ದಾರೆ. ಕೃಷ್ಣಲೀಲಾ, ಭಾವಯಾಮಿ, ನೃತ್ಯಸಂಧ್ಯಾ ಇತ್ಯಾದಿ ನೃತ್ಯರೂಪಕಗಳಲ್ಲಿ ಅಭಿನಯಿಸಿರುವ ತೇಜಸ್ವಿನಿ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

ಸ್ಥಳ: ಜೆಎಸ್ಎಸ್ ಶಿವರಾತ್ರೀಶ್ವರ ಕೇಂದ್ರ, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ ಸಂಜೆ. 6 ಗಂಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.