ಶುಕ್ರವಾರ, ಜನವರಿ 17, 2020
24 °C

ತೇಜ್‌ಪಾಲ್ ‘ಪೊಲೀಸ್ ಕಸ್ಟಡಿ’ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ(ಐಎಎನ್ಎಸ್): ಸಹೋದ್ಯೋಗಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ‘ತೆಹೆಲ್ಕಾ’ ಸಂಪಾದಕ ತರುಣ್ ತೇಜ್‌ಪಾಲ್ ಅವರ ‘ಪೊಲೀಸ್ ಕಸ್ಟಡಿ’ಯನ್ನು ಶನಿವಾರ ನಾಲ್ಕು ದಿನಗಳ ಅವಧಿಗೆ ವಿಸ್ತರಿಸಲಾಗಿದೆ.ಲೈಂಗಿಕ ಹಲ್ಲೆ ಆರೋಪ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಕಸ್ಟಡಿ ವಿಸ್ತರಿಸುವಂತೆ  ಪೊಲೀಸರು ಸಲ್ಲಿಸಿದ ಬೇಡಿಕೆಯನ್ನು ಪರಿಗಣಿಸಿ ಸ್ಥಳೀಯ ನ್ಯಾಯಾಧೀಶರು ತೇಜ್‌ಪಾಲ್ ಅವರ ‘ಪೊಲೀಸ್‌ ಕಸ್ಟಡಿ’ಯನ್ನು ನಾಲ್ಕು ದಿನಗಳ ವರೆಗೆ ವಿಸ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)