ಮಂಗಳವಾರ, ಜನವರಿ 28, 2020
22 °C

ತೊದಲಬಾಗಿ ಹೋರಿಗೆ ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ಅಂಗವಾಗಿ ನಡೆದ ಜಾನುವಾರು ಜಾತ್ರೆಯಲ್ಲಿ ತೊದಲಬಾಗಿ ಹೋರಿಗೆ ಚಿನ್ನದ ಪದಕ, ಖೇಮಲಾಪುರ, ಮಮದಾಪುರ, ಹಡಗಲಿ ಹೋರಿ ಹಾಗೂ ಆಲಗೂರು ಕಿಲಾರಿ ಆಕಳಿಗೆ ರೂ.21 ಸಾವಿರ ನಗದು ಬಹುಮಾನ ನೀಡಲಾಯಿತು.ವಿಜಾಪುರ ನಗರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಎ.ಪಿ.ಎಂ.ಸಿ. ಅಧ್ಯಕ್ಷ ಎಚ್.ಎಸ್. ಕೋರಡ್ಡಿ, ಉಪಾಧ್ಯಕ್ಷ ಅರ್ಜುನ ರಾಠೋಡ ವಿಜೇತ ರಾಸುಗಳಿಗೆ ಹೂಮಾಲೆ ಹಾಕಿ, ಜಾನುವಾರು ಮಾಲೀಕರಿಗೆ ಬಹುಮಾನ- ಪ್ರಶಸ್ತಿ ಪತ್ರ ವಿತರಿಸಿದರು.ಜಾತ್ರೆ ಚಾಂಪಿಯನ್ ಪ್ರಶಸ್ತಿ: ರಾಯಬಾಗ ತಾಲ್ಲೂಕಿನ ಖೇಮಲಾಪುರ ಗ್ರಾಮದ ಪ್ರಕಾಶ ಕೃಷ್ಣಪ್ಪ ಅಂಬಿ ಅವರ ಹಾಲು ಹಲ್ಲಿನ ಹೋರಿ. (ನಗರಸಭೆಯ ರೂ.21 ಸಾವಿರ ಬಹುಮಾನ).ಬಿ.ಎಲ್.ಡಿ.ಇ. ಸಂಸ್ಥೆ ಪ್ರಾಯೋಜಿತ 10 ಗ್ರಾಮ ಚಿನ್ನದ ಪದಕ ಜಮಖಂಡಿ ತಾಲ್ಲೂಕಿನ ತೊದಲಬಾಗಿಯ ಅಪ್ಪಾಸಿ ಭೀಮಪ್ಪ ಕೊಕಟನೂರ ಅವರ ಎರಡು ಹಲ್ಲಿನ ಹೋರಿಗೆ ಲಭಿಸಿತು.ವಿಜಾಪುರ ಎ.ಪಿ.ಎಂ.ಸಿ. ಪ್ರಾಯೋಜಿತ ರೂ. 21 ಸಾವಿರ ಬಹುಮಾನ ಸದಾಸಿವ ಸಾಬು ಶಿವಪ್ಪಗೋಳ ಅವರ ನಾಲ್ಕು ಹಲ್ಲಿನ ಹೋರಿಗೆ, ಜಿಲ್ಲಾ ಪಂಚಾಯಿತಿ  ಪ್ರಾಯೋಜಿತ ರೂ 21 ಸಾವಿರ ಬಹುಮಾನ ಫೂಲಸಿಂಗ್ ನಾರಾಯಣ ರಾಠೋಡ ಅವರ ಆರು ಹಲ್ಲಿನ ಹೋರಿಗೆ ಲಭಿಸಿತು.ಚಾಂಪಿಯನ್ ಪ್ರಶಸ್ತಿ: ವಿಜಾಪುರ ವ್ಯಾಪಾರಸ್ಥರ ಸಂಘದ ರೂ.21 ಸಾವಿರ ಬಹುಮಾನ ಜಮಖಂಡಿ ತಾಲ್ಲೂಕು ಆಲಗೂರ ಗ್ರಾಮದ ಪದಮಣ್ಣ ನ್ಯಾಮಣ್ಣ ಜಾಯಗೊಂಡ ಅವರ ಕಿಲಾರಿ ಆಕಳ ಮನಕಕ್ಕೆ ಲಭಿಸಿತು.ಸಿದ್ಧೇಶ್ವರ ಸಂಸ್ಥೆ ಪ್ರಾಯೋಜಿತ 7.5 ಗ್ರಾಮದ ಚಿನ್ನದ ಪದಕ ಭರಟಗಿ ಗ್ರಾಮದ ಲಕ್ಷಣ ಕೃಷ್ಣ ರಾಠೋಡ ಅವರ ಕಿಲಾರಿ ಆಕಳಿಗೆ ಲಭಿಸಿತು.ವಿಜಾಪುರ ಬಿ.ಡಿ.ಸಿ.ಸಿ. ಬ್ಯಾಂಕ್ ಪ್ರಾಯೋಜಿತ ರೂ.10 ಸಾವಿರ ಬಹುಮಾನ ಜಮಖಂಡಿ ತಾಲ್ಲೂಕಿನ ಪಡಸಲಗಿ ಮಹಾದೇವ ಬಸಪ್ಪ ಶಿರಗುಪ್ಪಿ ಅವರ ಎತ್ತಿನ ಜೋಡಿಗೆ ಲಭಿಸಿತು. ವಿಜಾಪುರ ಆಯಿಲ್ ಮಿಲ್ ಸಂಘ ಪ್ರಾಯೋಸಿದ ರೂ.15 ಸಾವಿರ ಬಹುಮಾನ ಇಂಡಿ ತಾಲ್ಲೂಕಿನ ಗೊರನಾಳದ ರಾಹುಲ್ ಸಂಜೀವ ಶಿಂಧೆ ಅವರ ಹಾಲು ಹಲ್ಲಿನ ಹೋರಿಗೆ ಲಭಿಸಿದೆ.ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಹಾಗೂ ಕಿರಾಣಿ ವರ್ತಕರ ಸಂಘದವರ ರೂ 9 ಸಾವಿರ ಬಹುಮಾನ ಅಥಣಿ ತಾಲ್ಲೂಕು ಶೇಗುಣಸಿಯ ರಾಜು ನಾಗಪ್ಪ ಕರೆಪ್ಪನವರ ಅವರ ಎರಡು ಹಲ್ಲಿನ ಹೋರಿಗೆ ಲಭಿಸಿತು.ವಿಜಾಪುರ ಕೆ.ಎಂ.ಎಫ್. ಪ್ರಾಯೋಜಿತ ರೂ.10 ಸಾವಿರ ನಗದು ಬಹುಮಾನ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಅಬ್ದುಲಸಾಬ ಫೀರಸಾಬ ಖುರೇಶಿ ಅವರ ನಾಲ್ಕು ಹಲ್ಲಿನ ಹೋರಿಗೆ ಲಭಿಸಿದೆ.

ಪ್ರತಿಕ್ರಿಯಿಸಿ (+)