ಬುಧವಾರ, ಮಾರ್ಚ್ 3, 2021
23 °C
ಸೋಚಿ ಚಳಿಗಾಲದ ಒಲಿಂಪಿಕ್ಸ್‌ಗೆ ಚಾಲನೆ

ತ್ರಿವರ್ಣ ಧ್ವಜಕ್ಕಿಲ್ಲ ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿವರ್ಣ ಧ್ವಜಕ್ಕಿಲ್ಲ ಮಾನ್ಯತೆ

ಸೋಚಿ, ರಷ್ಯಾ (ಪಿಟಿಐ):  ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಚಳಿಗಾಲದ ಒಲಿಂಪಿಕ್ಸ್‌ ಶುಕ್ರವಾರ ಆರಂಭಗೊಂಡಿತು. ಆದರೆ ಇಲ್ಲಿನ ಫಿಸ್ಟ್‌ ಒಲಿಂಪಿಕ್‌ ಕ್ರೀಡಾಂಗಣದಲ್ಲಿ ನಡೆದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಭಾರತದ ಸ್ಪರ್ಧಿಗಳ ತಂಡ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿರಲಿಲ್ಲ !ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಮತ್ತು ಭಾರತ ಒಲಿಂಪಿಕ್‌ ಸಂಸ್ಥೆ ನಡುವಣ ‘ಸಂಘರ್ಷ’ ಮುಗಿದಿಲ್ಲ. ಐಒಸಿಯ ಮಾರ್ಗದರ್ಶಿ ಸೂತ್ರಗಳನ್ನು ಕೆಲವು ವಿಷಯಗಳಿಗೆ ಅನ್ವಯಿಸಲು ಅಸಾಧ್ಯ ಎಂದು ಐಒಎ ಪಟ್ಟು ಹಿಡಿದಾಗ, 2012ರ ಡಿಸೆಂಬರ್‌ನಲ್ಲಿ ಐಒಎಯನ್ನು ಅಮಾನತ್ತುಗೊಳಿಸಲಾಯಿತು.

ಅಲ್ಲಿಂದ ಈವರೆಗೆ ಈ ಅಮಾನತ್ತನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಭಾರತ ಒಲಿಂಪಿಕ್‌ ಸಂಸ್ಥೆಯ ಆಡಳಿತಗಾರರು ಯಶಃ ಪಡೆದಿಲ್ಲ. ಯಾವುದೇ ದೇಶದ ಒಲಿಂಪಿಕ್‌ ಸಂಸ್ಥೆಯನ್ನು ಐಒಸಿ ಅಮಾನತುಗೊಳಿಸಿದರೆ, ಆ ದೇಶದ ಸಂಬಂಧಪಟ್ಟ ಕ್ರೀಡಾ ತಂಡ ಅಂತರ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಐಒಸಿ ಧ್ವಜವನ್ನು ಹಿಡಿದು ಸ್ಪರ್ಧಿಸ ಬೇಕಾಗುತ್ತದೆ. ಹೀಗಾಗಿ, ಇಲ್ಲಿ ಭಾರತದ ಸ್ಪರ್ಧಿಗಳು ತ್ರಿವರ್ಣ ಧ್ವಜ ಹಿಡಿದಿರಲಿಲ್ಲ.ಭಾರತದ ಶಿವಕೇಶವನ್‌, ಹಿಮಾಂಶು ಠಾಕೂರ್‌ ಮತ್ತು ನದೀಮ್‌ ಇಕ್ಬಾಲ್‌ ಅವರಿದ್ದ ಭಾರತ ತಂಡವನ್ನು ಐಒಸಿ ನಿಯಮದ ಪ್ರಕಾರ ಇಲ್ಲಿ ‘ಸ್ವತಂತ್ರ ಕ್ರೀಡಾಪಟು’ಗಳು ಎಂದು ಪರಿಗಣಿಸಲಾಗಿದೆ. ಒಲಿಂಪಿಕ್ಸ್‌ ಕೂಟದಂತಹ ಮಹತ್ವದ ಕ್ರೀಡಾಕೂಟದಲ್ಲಿ ಭಾರತ ಇಂತಹ ಅವಮಾನ ಅನುಭವಿಸಿದ್ದು ಇದೇ ಮೊದಲು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.