ಬ್ಯಾಂಕಾಂಕ್ (ಪಿಟಿಐ): ಥಾಯ್ಲೆಂಡ್ನಲ್ಲಿ ಬೀದಿಗಿಳಿದಿರುವ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು, ಚುನಾವಣಾ ನೋಂದಣಿಗೆ ನಿಗದಿಪಡಿಸಲಾಗಿರುವ ಕ್ರೀಡಾಂಗಣಕ್ಕೆ ಮುತ್ತಿಗೆ ಹಾಕಲು ಸೋಮವಾರ ವಿಫಲ ಯತ್ನ ನಡೆಸಿದರು.

ಚುನಾವಣಾ ಕೆಲಸಕ್ಕೆ ನಿಗದಿಯಾಗಿರುವ ಥಾಯ್– ಜಪಾನೀಸ್ ಕ್ರೀಡಾಂಗಣಕ್ಕೆ ನೂರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಫೆ. 2ರಂದು ಚುನಾವಣೆ ಘೋಷಣೆಯಾಗಿದ್ದು ಇದೇ 27ರ ಒಳಗೆ ರಾಜಕೀಯ ಪಕ್ಷಗಳು ನೋಂದಣಿ ಮಾಡಿಕೊಳ್ಳಬೇಕಾಗಿದೆ.

ವಿವಿಧ ಪಕ್ಷಗಳ ರಾಜಕೀಯ ನಾಯಕರು ತಮ್ಮ ಪಕ್ಷ ಮತ್ತು ಅಭ್ಯರ್ಥಿಗಳ ಹೆಸರನ್ನು ನೋಂದಾಯಿಸುವುದನ್ನು ತಡೆಯುವುದು ಪ್ರತಿಭಟನಾಕಾರರ
ಉದ್ದೇಶವಾಗಿತ್ತು; ಉಸ್ತುವಾರಿ ವಹಿಸಿರುವ ಯಿಂಗ್ಲುಕ್ ಶಿನವಾತ್ರ ಅವರ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಬಹುದೋ ಎಂಬ ಆತಂಕವೇ ಪ್ರತಿಭಟನಾಕರರ ಈ ಹೆಜ್ಜೆಗೆ ಕಾರಣ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.