ಬುಧವಾರ, ಜನವರಿ 22, 2020
16 °C
ಕೊನೆಗೂ ಮಣಿದ ಪ್ರಧಾನಿ ಯಿಂಗ್ಲಕ್‌ ಶಿನವತ್ರಾ: ಮೂರು ವರ್ಷದ ಆಡಳಿತ ಕೊನೆ

ಥಾಯ್ಲೆಂಡ್‌ ಸಂಸತ್‌ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಥಾಯ್ಲೆಂಡ್‌ ಸಂಸತ್‌ ವಿಸರ್ಜನೆ

ಬ್ಯಾಂಕಾಕ್‌ (ಪಿಟಿಐ): ಸರ್ಕಾರದ ವಿರು-ದ್ಧದ  ಬಂಡಾಯಕ್ಕೆ ಮಣಿದಿ­ರುವ ಥಾಯ್ಲೆಂಡ್‌ ಪ್ರಧಾನಿ ಯಿಂಗ್ಲಕ್‌ ಶಿನವತ್ರಾ  ಸೋಮವಾರ ನಿರೀಕ್ಷೆ­ಯಂತೆ ಸಂಸತ್‌ ವಿಸರ್ಜಿ­ಸಿದ್ದಾರೆ.ದೇಶದ ರಾಜಕೀಯ ಅಸ್ಥಿರತೆ ಕೊನೆ­ಗಾಣಿಸಲು ಈ ನಿರ್ಧಾರ ಕೈಗೊಂ­ಡಿ­ರುವುದಾಗಿ ರಾಷ್ಟ್ರದ ಜನ­ರನ್ನು ಉದ್ದೇಶಿಸಿ ಟ.ವಿ. ಯಲ್ಲಿ ಮಾಡಿದ ಭಾಷಣದಲ್ಲಿ   ಅವರು ಹೇಳಿದ್ದಾರೆ.ಫೆಬ್ರುವರಿ 2ರ ಒಳಗಾಗಿ ಪ್ರಜಾ­ಸತ್ತಾತ್ಮಕ ರೀತಿಯಲ್ಲಿ ಹೊಸ ಚುನಾ­ವಣೆ ನಡೆಯಲಿವೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವರೆಗೂ ಮಧ್ಯಂತರ ಸರ್ಕಾರದ  ಹಂಗಾಮಿ ಪ್ರಧಾನಿ­ಯಾಗಿ ಅಧಿಕಾರದಲ್ಲಿ ಮುಂದುವರಿ­ಯುವುದಾ­ಗಿಯೂ ಅವರು ಸ್ಪಷ್ಟ­ಪಡಿಸಿದ್ದಾರೆ.ಸರ್ಕಾರ ವಿರೋಧಿ ದಂಗೆ ತೀವ್ರ­ಗೊಳ್ಳುತ್ತಲೇ ಭಾರಿ ಒತ್ತಡಕ್ಕೆ ಒಳ­ಗಾಗಿದ್ದ  ಶಿನವತ್ರಾ  ಸಂಸತ್‌ ವಿಸರ್ಜಿ­ಸುವ ಸುಳಿವು ನೀಡಿದ್ದರು.

ಶಿನವತ್ರಾ  ಪ್ರಸ್ತಾವನೆ ತಳ್ಳಿಹಾಕಿ­ರುವ ಪ್ರತಿಭಟನಾಕಾರರು,  ಸಂಸತ್‌ ವಿಸರ್ಜನೆಯಾದ ನಂತರ ಅವರು ಅಧಿ­ಕಾರದಲ್ಲಿ ಮುಂದುವರಿಯು­ವು­ದರಲ್ಲಿ ಅರ್ಥವಿಲ್ಲ.  ಹೀಗಾಗಿ ಅವರು ತಕ್ಷಣ  ರಾಜೀನಾಮೆ ನೀಡ­ಬೇಕು ಎಂದು ಪಟ್ಟು ಹಿಡಿದಿದ್ದಾರೆ.ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಜನಪ್ರತಿ­ನಿಧಿ­ಗಳ ಮಂಡಳಿ (ಪೀಪಲ್ಸ್‌ ಕೌನ್ಸಿಲ್‌) ಆಡಳಿತ ವ್ಯವಸ್ಥೆ ಜಾರಿಗೆ ತರು­ವಂತೆ  ಸಾವಿರಾರು ಜನರು ಪ್ರತಿ­ಭ­ಟನೆ­ಯಲ್ಲಿ ತೊಡಗಿದ್ದಾರೆ. ಆಡಳಿತ ವಿರೋಧಿ ಪ್ರತಿಭಟನಾ­ಕಾರರನ್ನು ಒಳಗೊಂಡ ಸುಥೆಪ್‌ ತೌಗ್ಸು­ಬಾನ್‌ ನೇತೃತ್ವದ  ‘ಪ್ರಜಾಸ­ತ್ತಾ­ತ್ಮಕ ಸುಧಾರಣಾ ಸಮಿತಿ’ಗೆ ಈ ಜನಪ್ರತಿನಿಧಿಗಳ ಮಂಡಳಿಯ ಚುಕ್ಕಾಣಿ ನೀಡಬೇಕು ಎಂಬ ಬೇಡಿಕೆ­ಯನ್ನು ಮುಂದಿಡಲಾಗಿದೆ.ಶಿನವತ್ರಾ ಆಡಳಿತ ಕೊನೆಗಾಣಿ­ಸಲು ಸೋಮವಾರ ಅಂತಿಮ ಹೋರಾ­­­ಟಕ್ಕೆ ತೌಗ್ಸುಬಾನ್‌ ಕರೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಲಕ್ಷಾಂತರ ಸಂಖ್ಯೆ­ಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸರ್ಕಾರಿ ಭವನಕ್ಕೆ ಮುತ್ತಿಗೆ ಹಾಕಿದರು.2011ರಲ್ಲಿ ಅಧಿಕಾರಕ್ಕೆ ಬಂದ 46 ವರ್ಷದ ಪ್ರಧಾನಿ ಯಿಂಗ್ಲಕ್‌ ಶಿನ­ವತ್ರಾ ಅವರು ತಮ್ಮ ಸಹೋದರ ಹಾಗೂ  ಗಡೀಪಾರಾಗಿರುವ ಈ ಹಿಂದಿನ ಪ್ರಧಾನಿ ಥಕ್ಸಿನ್‌ ಶಿನವತ್ರಾ  ಆಣತಿ­ಯಂತೆ ಆಡಳಿತ ನಡೆಸು­ತ್ತಿದ್ದಾರೆ ಎನ್ನುವುದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಟಿಟ್‌ ವಾಂಗ್‌ನೊಟ್ಯಾಗಿ ಅವರ ಆರೋಪ.2011ರಲ್ಲಿ ಅಧಿಕಾರಕ್ಕೆ ಬಂದ 46 ವರ್ಷದ ಪ್ರಧಾನಿ ಯಿಂಗ್ಲಕ್‌ ಶಿನ­ವತ್ರಾ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಹಂಗಾಮಿ ಪ್ರಧಾನಿಯಾಗಿ ಮುಂದುವರೆಯುವುದಾಗಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)